LATEST NEWS
ಕಾಪು – ಟ್ಯಾಂಕರ್ ನಿಂದ ಸೊರಿಕೆಯಾದ ಲಿಕ್ವಿಡ್ ಗ್ಯಾಸ್
ಕಾಪು ಜುಲೈ 08: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಟ್ಯಾಂಕರ್ ಒಂದರಿಂದ ಲಿಕ್ವಡ್ ಸೋರಿಯಾಗಿ ಕೆಲಕಾಲ ಆತಂಕ ಸೃಷ್ಠಿಯಾದ ಘಟನೆ ನಡೆದಿದೆ.
ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಿಂದ ಉಳಿಯಾರಗೊಳಿ ದಂಡತೀರ್ಥ ಬಳಿ ಲಿಕ್ವಿಡ್ ಗ್ಯಾಸ್ ರೀತಿ ಸೋರಿಕೆಯಾಗಿದ್ದು, ಪರಿಸರದ ಸುತ್ತ ಬಿಳಿ ಬಣ್ಣದ ಹೊಗೆ ತುಂಬಿಕೊಂಡಿತ್ತು. ಟ್ಯಾಂಕರ್ ನಲ್ಲಿ ಉಂಟಾದ ತಾಂತ್ರಿಕ ಕಾರಣದಿಂದ ಗ್ಯಾಸ್ ಸೋರಿಕೆಯಾಗಿದೆ ಎಂದು ಹೇಳಲಾಗಿದ್ದು ,ಕೂಡಲೇ ಸ್ಥಳಕ್ಕೆ ಆಗಮಿಸಿದ ಕಾಪು ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ. ಏಕಪಥವಾಗಿ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಕಲ್ಪಿಸಿದ್ದಾರೆ.
You must be logged in to post a comment Login