Connect with us

    DAKSHINA KANNADA

    ಮರಗಳ್ಳತನ ಬಗ್ಗೆ ದೂರು ನೀಡಿದ್ದಕ್ಕೆ ದೂರುದಾರನ ಮನೆಗೆ ಮಧ್ಯರಾತ್ರಿ ನುಗ್ಗಿದ ಅರಣ್ಯ ಇಲಾಖೆ ಅಧಿಕಾರಿಗಳು..!!

    ಪುತ್ತೂರು ಮಾರ್ಚ್ 3: ಬಿಳಿನೆಲೆ ರಕ್ಷಿತಾರಣ್ಯದಲ್ಲಿ ಅಕ್ರಮವಾಗಿ ನೂರಾರು ಮರಗಳ ಸಾಗಾಟದ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದ ಬಿಳಿನೆಲೆ ಪ್ರಸಾದ್ ಎಂಬವರ ಮನೆಗೆ ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ತೆರಳಿ ದಾಂಧಲೆ ನಡೆಸಿದ್ದು, ಮನೆಯಲ್ಲಿದ್ದ ಹಿರಿಯ ಜೀವಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


    ಬಿಳಿನೆಲೆ ರಕ್ಷಿತಾರಣ್ಯದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಸ್ಥಳೀಯ ನಿವಾಸಿ ಬಿಳಿನೆಲೆಯ ಪ್ರಸಾದ್ ಎನ್ನುವವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದರು, ಅಲ್ಲದೆ ಮಾಧ್ಯಮಗಳಿಗೆ ಈ ಅಕ್ರಮಗಳ ಕುರಿತು ಮಾಹಿತಿಯನ್ನು ನೀಡಿದ್ದರು.


    ಈ ಹಿನ್ನಲೆ ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವೊಂದು ನಿನ್ನೆ ಮಧ್ಯರಾತ್ರಿ ಪ್ರಸಾದ್ ಅವರ ಮನೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಆರೋಪಿಸಲಾಗಿದ್ದು. ಅಕ್ರಮಗಳನ್ನು ಪ್ರಶ್ನಿಸಿ ದೂರು ನೀಡಿದ್ದಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಸಾದ್ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಮಧ್ಯರಾತ್ರಿ 1.30 ರ ಸುಮಾರಿಗೆ ಮನೆಗೆ ನುಗ್ಗಿದ ಅರಣ್ಯ ಇಲಾಖೆ ಸಿಬ್ಬಂದಿಗಳು, ಮನೆಯಲ್ಲಿದ್ದವರ ಮೇಲೂ ಹಲ್ಲೆ ನಡೆಸಿದ್ದಾರೆ ಆರೋಪಿಸಲಾಗಿದ್ದು, ಅಲ್ಲದೆ 30 ವರ್ಷಗಳ ಹಿಂದೆ ಪ್ರಸಾದ್ ತಂದೆ ಮಾಡಿಸಿದ್ದ ಮನೆ ಮಹಡಿಗೆ ಮುಚ್ಚಿಗೆ ಹಾಕಿದ್ದ ಮರದ ಹಲಗೆಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೊಂಡೊಯ್ದಿದ್ದಾರೆ. ಮಾಧ್ಯಮಗಳಿಗೆ ಮರಕಳ್ಳ ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಈ ರೀತಿ ಮಾಡಿರುವುದಾಗಿ ಮನೆಯವರಿಗೆ ಬೆದರಿಕೆಯನ್ನು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply