Connect with us

    DAKSHINA KANNADA

    ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಕರಾವಳಿಯಲ್ಲಿ ಸಂಭ್ರಮದ ಕ್ರಿಸ್ಮಸ್ ಆಚರಣೆ

    ಮಂಗಳೂರು :  ಯೇಸು ಕ್ರಿಸ್ತರ ಜನನದ ದಿನವಾದ ಡಿ.25 ರಂದು ಕ್ರಿಸ್ಮಸ್ ಹಬ್ಬವನ್ನು ಜಗತ್ತಿನಾದ್ಯಂತ ಇಂದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಕರಾವಳಿಯಲ್ಲೂ ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಸಂಭ್ರಮದ ವಾತಾವರಣ ಮನೆ ಮಾಡಿದೆ.

    ಕರಾವಳಿಯ ಪ್ರಮುಖ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಕ್ರಿಸ್ ಹಬ್ಬದ  ಸಂಭ್ರಮ ಮುಗಿಲು ಮುಟ್ಟಿತ್ತು.  ಅವಿಭಾಜ್ಯ ದಕ್ಷಿಣ ಕನ್ನ ಜಿಲ್ಲೆಯ  ಪ್ರಮುಖ ವಾಣಿಜ್ಯ ನಗರ ಮಂಗಳೂರಿನ ಕ್ರೈಸ್ತ ದೇವಾಲಯಗಳಲ್ಲಿ ಮತ್ತು ಕ್ರೈಸ್ತರ ಮನೆ ಮನಗಳಲ್ಲಿ ಹಬ್ಬದ ಸಡಗರದ ವಾತಾವರಣ ನೆಲೆಸಿದೆ.

    ಕ್ರಿಸ್ಮಸ್ ಆಚರಣೆಯ ಮುನ್ನಾ ದಿನವಾದ ಭಾನುವಾರ ರಾತ್ರಿ ಮಂಗಳೂರಿನ ಅತೀ ಹಿರಿಯ ಚರ್ಚ್ ಆಗಿರುವ ರೊಸಾರಿಯೊ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ನೆರವೇರಿತು.

     

    ಮಂಗಳೂರು ಧರ್ಮಪ್ರಾಂತ್ಯದ ಬಲಿಪೂಜೆ ನೆರವೇರಿಸಿ, ಕ್ರಿಸ್ಮಸ್ ಹಬ್ಬದ ಸಂದೇಶದೊಂದಿಗೆ, ಆಶಿರ್ವಚನ ನೀಡಿದರು. ದೇವರು ನೀಡಿದ ಉದಾತ್ತ ವಿಚಾರಗಳಾದ ಎಲ್ಲರನ್ನೂ ಪ್ರೀತಿಸುವ, ಸಹಕಾರ, ತಾಳ್ಮೆ, ಕುಟುಂಬ ವ್ಯವಸ್ಥೆಯಲ್ಲಿ ಅನ್ಯೋನ್ಯತೆ, ಕ್ಷಮೆ, ವಿನಯತೆಯಂತಹ ವಿಚಾರಗಳನ್ನು ಮೈಗೂಡಿಸಿಕೊಂಡು ದೇವರೊಂದಿಗೆ ಬದುಕು ಸವಿಸಲು ಮುಂದಾಗಬೇಕು.

    ಗೋದಲಿಯಲ್ಲಿ ಶ್ರೀಸಾಮಾನ್ಯರಂತೆ ಹುಟ್ಟಿದ ಯೇಸು ಜಗತ್ತಿನಲ್ಲಿ ತನ್ನ ಸರಳತೆಯ ಮೂಲಕ ಪ್ರೀತಿ, ಶಾಂತಿ, ನೆಮ್ಮದಿ ಹಾಗೂ ಕ್ಷಮಿಸುವ ಗುಣವನ್ನು ಮೈಗೂಡಿಸಿಕೊಳ್ಳಲು ಸೂಚಿಸಿದ್ದರು ಎಂದರು.

    ಈ ಸಂದರ್ಭ ರೊಸಾರಿಯೋ ಕೆಥೆಡ್ರಲ್‌ನ ಪ್ರಧಾನ ಧರ್ಮಗುರು ಫಾ. ಆಲ್ಫ್ರೆಡ್ ಪಿಂಟೋ ಹಾಗೂ ಆಸುಪಾಸಿನ ಚರ್ಚ್‌ಗಳ ಧರ್ಮಗುರುಗಳು ಪಾಲ್ಗೊಂಡಿದ್ದರು. ಸಾವಿರಾರು ಕ್ರೈಸ್ತ ಭಾಂಧವರು ಈ ಪವಿತ್ರ ಸಂಭ್ರಮದ ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಕೆಲರೈ ಸಂತ ಅನ್ನಾ ಚರ್ಚಿನಲ್ಲೂ ಕ್ರಿಸ್ ಹಬ್ಬದ ಪ್ರಯುಕ್ತ ವಿಶೇಷ ಬಲಿಪೂಜೆ ನೆರವೇರಿತು.

    ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಸ್ ಡಿಜೋಜಾ ಅವರು ವಿಶೇಷ ಪೂಜೆ ನೆರವೇರಿಸಿ ಕ್ರಿಸ್ಮಸ್ ಸಂದೇಶ ನೀಡಿದರು. ನಗರದ ಪ್ರಮುಖ ಚರ್ಚ್‌ಗಳಾದ ಮಿಲಾಗ್ರಿಸ್, ಲೇಡಿಹಿಲ್, ಅಶೋಕನಗರ, ಕೂಳೂರು, ಬೆಂದೂರ್, ಬಾಲೇಸು ಮತ್ತಿತರ ಚರ್ಚ್‌ಗಳಲ್ಲಿ ಭಕ್ತರು ಬಲಿಪೂಜೆಯಲ್ಲಿ ಸಂಭ್ರಮದಿಂದ ಭಾಗವಹಿಸಿ ಪರಸ್ಪರ ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು. ಬಾನುವಾರದ ಸಂಜೆ ಹೊತ್ತು ಕ್ರಿಸ್ಮಸ್ ಕ್ಯಾರೆಲ್ಸ್, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಬ್ಬದ ಸಂಭ್ರಮದಲ್ಲಿ ಪರಸ್ಪರ ಶುಭಾಶಯ ಕೋರುವ ಸಿಹಿತಿನಿಸುಗಳು (ಕುಸ್ವಾರ್), ಕೇಕ್‌ಗಳನ್ನು ನೀಡುವ ದೃಶ್ಯಗಳು ಎಲ್ಲೆಡೆ ಕಂಡುಬಂತು. ಚರ್ಚ್‌ಗಳಲ್ಲಿ ಬಲಿಪೂಜೆಯ ಜತೆಗೆ ಕೇಕ್‌ಗಳನ್ನು ನೀಡುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲಾಯಿತು.

     

    Share Information
    Advertisement
    Click to comment

    You must be logged in to post a comment Login

    Leave a Reply