Connect with us

DAKSHINA KANNADA

ಅಗತ್ಯ ವಸ್ತುಗಳ ಖರೀದಿಗೆ ಜನರನ್ನು ನಿಯಂತ್ರಿಸಲು ದಕ್ಷಿಣಕನ್ನಡ ಪೊಲೀಸ್ ಇಲಾಖೆ ಹೊಸ ಪ್ರಯತ್ನ

ಅಗತ್ಯ ವಸ್ತುಗಳ ಖರೀದಿಗೆ ಜನರನ್ನು ನಿಯಂತ್ರಿಸಲು ದಕ್ಷಿಣಕನ್ನಡ ಪೊಲೀಸ್ ಇಲಾಖೆ ಹೊಸ ಪ್ರಯತ್ನ

ಮಂಗಳೂರು ಮಾರ್ಚ್ 27: ಕರೋನಾ ಮುಂಜಾಗೃತಾ ಕ್ರಮವಾಗಿ ಸಾಮಾಜಿಕ ಅಂತರ ಕಾಯ್ದುಗೊಳ್ಳಲು ಹಾಗೂ ಅಗತ್ಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಮುಗಿಬೀಳುವ ಸಾರ್ವಜನಿಕರನ್ನು ತಡೆಯಲು ದಕ್ಷಿಣಕನ್ನಡ ಪೋಲೀಸ್ ಇಲಾಖೆ ಹೊಸ ಪ್ರಯತ್ನ ಆರಂಭಿಸಿದೆ.

ಪುತ್ತೂರು ನಗರ ಸಭಾ ವ್ಯಾಪ್ತಿಯ 28 ವಾರ್ಡ್ ಗಳಲ್ಲಿ ಅಗತ್ಯ ಸಾಮಾಗ್ರಿ ಖರೀದಿಗೆ ಸಮಯ ನಿಗಧಿ ಮಾಡಿದೆ. 28 ವಾರ್ಡ್ ಗಳನ್ನು 9 ವಾರ್ಡ್ ಗಳಂತೆ ಮೂರು ಭಾಗವಾಗಿ ವಿಂಗಡಿಸಲಾಗಿದ್ದು, ಈ ವಾರ್ಡ್ ಗಳಲ್ಲಿ ಬೆಳಿಗ್ಗೆ 6 ರಿಂದ 8 ರ ವರೆಗೆ ಒಂದು ಭಾಗದಲ್ಲಿ, 8 ರಿಂದ 10 ಇನ್ನೊಂದು ಹಾಗೂ 10 ರಿಂದ 12 ಮತ್ತೊಂದು ಭಾಗದಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಗುತ್ತಿದೆ‌. ಇದರಿಂದಾಗಿ ನಗರ ಭಾಗದಲ್ಲಿ ಜನ ದಟ್ಟಣೆ ನಿಯಂತ್ರಣ ಸಾಧ್ಯ ಎನ್ನುವ ನಿಟ್ಟಿನಲ್ಲಿ ಈ ಪ್ರಯೋಗ ಮಾಡಲಾಗಿದೆ.