DAKSHINA KANNADA
ಗೋಡಂಬಿ ಗಂಟಲಲ್ಲಿ ಸಿಲುಕಿ ಮಗು ಸಾವು
ಪುತ್ತೂರು ಮಾರ್ಚ್ 11: ಗೋಡಂಬಿ ಬೀಜವೊಂದು ಮೂರು ವರ್ಷದ ಮಗುವಿನ ಗಂಟಲಲ್ಲಿ ಸಿಲುಕಿ ಮಗು ಸಾವನಪ್ಪಿರುವ ಘಟನೆ ಪುತ್ತೂರಿನಮ ಸಾಲ್ಮರ ಎಂಬಲ್ಲಿ ನಡೆದಿದೆ.
ಸಾಲ್ಮರ ಉರಮಾಲ್ ನಿವಾಸಿ ಇಸಾಕ್ ಎಂಬವರ ಮೂರುವರೆ ವರ್ಷದ ಮಗು ಮನೆಯಲ್ಲಿ ಗೋಡಂಬಿ ತಿನ್ನುವಾಗ ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡಿದೆ. ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಸಿಗದ ಕಾರಣ ಮಂಗಳೂರಿಗೆ ಕರೆದುಕೊಂಡು ಹೋಗುವ ದಾರಿ ಮಧ್ಯದಲ್ಲೇ ಮಗು ಸಾವನ್ನಪ್ಪಿದೆ.
ಇದೇ ರೀತಿ ಶಿವಮೊಗ್ಗದಲ್ಲಿ ಮಗುವೊಂದು ಅಡಿಕೆ ನುಂಗಿ ಸಾವನಪ್ಪಿದ ಘಟನೆ ಕೆಲವು ದಿನಗಳ ಹಿಂದೆಯಷ್ಟೇ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಘಟನೆ ನಡೆಯುತ್ತಿರುವುದು ಪೋಷಕರು ಮಕ್ಕಳ ಕೈಗೆ ಯಾವುದೇ ತಿನಿಸು, ಆಟಿಕೆ ಕೊಡುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.