Connect with us

DAKSHINA KANNADA

ರಸ್ತೆ ಬದಿ ನಿಂತಿದ್ದ ವೃದ್ಧೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ: ಚಾಲಕನ ಬಂಧನ

ಮಂಗಳೂರು, ಜೂನ್ 04: ಮೂಡಬಿದಿರೆಯ ಜೈನಪೇಟೆಯ ರಸ್ತೆ ಬದಿ ನಿಂತಿದ್ದ ವೃದ್ಧೆಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಸವಾರನನ್ನು ಮೂಡಬಿದಿರೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೇ 30 ರಂದು ಜೈನಪೇಟೆಯ ಜೈನಮಠದ ತಿರುವಿನಲ್ಲಿ ವೃದ್ದ ಮಹಿಳೆ ನಿಂತಿದ್ದ ವೇಳೆ ರಿಕ್ಷಾ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ವೇಳೆ, ತಲೆಗೆ ಗಂಭೀರ ಏಟಿನೊಂದಿಗೆ ಗಾಯಗೊಂಡಿದ್ದ ಮಹಿಳೆ ಕೆಲಕಾಲ ರಸ್ತೆಯಂಚಿನಲ್ಲೇ ಕುಸಿದು ಬಿದ್ದಿದ್ದರು. ಇದಾದ ಸ್ವಲ್ಪ ಹೊತ್ತಿನಲ್ಲಿ ಅದೇ ದಾರಿಯಲ್ಲಿ ಕಾರಿನಲ್ಲಿ ಸಾಗುತ್ತಿದ್ದ ಬಿಜೆಪಿ ಹಿಂದುಳಿದ ವರ್ಗದ ಉಪಾಧ್ಯಕ್ಷ ಸಂಪತ್ ಪೂಜಾರಿ ನೆತ್ತೋಡಿ ಮಹಿಳೆಯನ್ನು ತಮ್ಮ ಕಾರಿನಲ್ಲೇ ಆಸ್ಪತ್ರೆಗೆ ದಾಖಲಿಸಿದ್ದರು.

ಗಾಯಗೊಂಡವರನ್ನು ಸ್ಥಳೀಯ ಮಹಿಳೆ ಗುಲಾಬಿ ಎಂದು ಗುರುತಿಸಲಾಗಿದ್ದು, ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

Video: