Connect with us

LATEST NEWS

ನಾಳೆ ರಾಜ್ಯಕ್ಕೆ ಮುಂಗಾರು ಪ್ರವೇಶ…ಕರಾವಳಿಯಲ್ಲಿ ಮಳೆ ಅಬ್ಬರ

ಮಂಗಳೂರು ಜೂನ್ 04: ಕೇರಳದಲ್ಲಿ ಮುಂಗಾರು ಪ್ರವೇಶವಾಗುತ್ತಿದ್ದಂತೆ ಕರಾವಳಿಯಲ್ಲೂ ಮಳೆಯ ಆರ್ಭಟ ಜೋರಾಗಿದೆ. ನಿನ್ನೆ ರಾತ್ರಿಯಿಂದಲೇ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ.


ಭಾರತಕ್ಕೆ ಕೇರಳ ಮೂಲಕ ನಿನ್ನೆ ಮುಂಗಾರು ಮಳೆ ಪ್ರವೇಶ ವಾಗಿದ್ದು, ಈ ಹಿನ್ನಲೆ ಜೂನ್ 5 ರವರೆಗೆ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು, ಅದರಂತೆ ನಿನ್ನೆ ರಾತ್ರಿಯಿಂದಲೇ ದಟ್ಟ ಮೋಡ ಕವಿದ ವಾತಾವರಣದೊಂದಿಗೆ ನಿರಂತರವಾಗಿ ವರ್ಷಧಾರೆಯಾಗುತ್ತಿದೆ. ರಾತ್ರಿ ಗುಡುಗು ಮಿಂಚಿನ ಅಬ್ಬರವಿತ್ತು. ಮುಂಗಾರು ಶನಿವಾರ ವೇಳೆಗೆ ಕರಾವಳಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ನಿರಂತರ ಮಳೆಯಿಂದಾಗಿ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಮಂಗಳೂರು ನಗರದಲ್ಲಿಎಂದಿನಂತೆ ರಸ್ತೆಯಲ್ಲಿಯೇ ನೀರು ಹರಿದಿದೆ. ಆದರೆ ವಾಹನ ಸಂಚಾರ ಕಡಿಮೆಯಾಗಿರುವುದರಿಂದ ಸಮಸ್ಯೆಯಾಗಿಲ್ಲ. ಕರಾವಳಿಗೆ ಇಂದು ಯೆಲ್ಲೋ ಅಲರ್ಟ್‌ ಇದ್ದು, ಭರ್ಜರಿ ಮಳೆ ನಿರೀಕ್ಷೆಯಿದೆ.