Connect with us

    LATEST NEWS

    ಸೆ*ಕ್ಸ್ ವೇಳೆ ಯುವತಿಗೆ ರಕ್ತಸ್ರಾವ – ರಕ್ತಸ್ರಾವ ನಿಲ್ಲಿಸಲು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ ಟೈಮ್ ವೆಸ್ಟ್ ಮಾಡಿದ ಪ್ರಿಯಕರ – ಯುವತಿ ಸಾವು

    ಗುಜರಾತ್ ಅಕ್ಟೋಬರ್ 02: ಸೆಕ್ಸ್ ವೇಳೆ ರಕ್ತಸ್ರಾವ ಉಂಟಾದ ಕಾರಣ ಯುವತಿಯೊಬ್ಬಳು ಸಾವನಪ್ಪಿದ ಘಟನೆ ಗುಜರಾತ್​​ನ ನವಸಾರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ಆದರೆ ರಕ್ತಸ್ರಾವವಾದರೂ ಯುವಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಗೂಗಲ್ ನಲ್ಲಿ ಗಂಟೆಗಟ್ಟಲೆ ಸರ್ಚ್ ಮಾಡಿ ಯುವತಿಯ ಸಾವಿಗೆ ಕಾರಣನಾಗಿದ್ದು, ಆತನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.


    ಗುಜರಾತ್​​ನ ನವಸಾರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ 23 ರಂದು ಈ ಘಟನೆ ನಡೆದಿದೆ. ನವಸಾರಿಯಲ್ಲಿ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಈ ಯುವತಿಗೆ, ಏಳು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಈ ಯುವಕನ ಪರಿಚವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿದೆ. ಇತ್ತೀಚಿಗಷ್ಟೇ ಇವರಿಬ್ಬರು ಭೇಟಿಯಾಗಿದ್ದು, ಲೈಂಗಿಕ ಸಂಭೋಗ ನಡೆಸಿದ್ದಾರೆ. ಆದರೆ ಈ ವೇಳೆ ಯುವತಿಗೆ ರಕ್ತ ಸ್ರಾವವಾಗಿದೆ. ಆದರೆ ಯುವಕ ಆಂಬ್ಯುಲೆನ್ಸ್​​​ಗೆ ಕರೆ ಮಾಡುವ ಬದಲಿಗೆ ಆತ ‘ಸಂಭೋಗದ ಸಮಯದಲ್ಲಿ ರಕ್ತಸ್ರಾವ (Blood Bleed) ನಿಲ್ಲಿಸಲು ಏನು ಮಾಡಬೇಕು’ ಎಂದು ತನ್ನ ಗೂಗಲ್​ನಲ್ಲಿ ಹುಡುಕಿದ್ದಾನೆ. ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ಆಕೆ ಜೀವ ಕಳೆದುಕೊಳ್ಳಬೇಕಾಯಿತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆಕೆ ತೀವ್ರ ರಕ್ತಸ್ರಾವದ ಹೊರತಾಗಿಯೂ ಆತ ಮತ್ತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.


    ಆದರೆ, ರಕ್ತಸ್ರಾವ ಹೆಚ್ಚಾಗುತ್ತಿರುವುದನ್ನು ನೋಡಿದ ಆತ, ಪರಿಹಾರಕ್ಕಾಗಿ 60 ರಿಂದ 90 ನಿಮಿಷಗಳ ಕಾಲ ತನ್ನ ಫೋನ್​​ನಲ್ಲಿ ಹುಡುಕಾಟ ನಡೆಸಿದ್ದಾನೆ. ರಕ್ತಸ್ರಾವ ನಿಲ್ಲಿಸಲು ಇಬ್ಬರು ಸಹ ಬಟ್ಟೆಯನ್ನು ಬಳಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಆಕೆ ಕೊನೆಗೆ ಮೂರ್ಛೆ ತಪ್ಪಿ ಬಿದ್ದಳು. ಬಳಿಕ ಯುವಕ ತನ್ನ ಸ್ನೇಹಿತನನ್ನು ಕರೆದನು. ಹೋಟೆಲ್ ಕೋಣೆಯಲ್ಲಿನ ರಕ್ತದ ಕಲೆಗಳನ್ನು ಸಹ ಅವರು ಸ್ವಚ್ಛಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ಖಾಸಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *