KARNATAKA
ಬಾಗಿಲ ಬಳಿ ನಿಲ್ಲಬೇಡ ಎಂದಿದ್ದಕ್ಕೆ BMTC ನಿರ್ವಾಹಕನಿಗೆ ಚಾಕು ಇರಿತ; ಆಘಾತಕಾರಿ ವಿಡಿಯೋ ವೈರಲ್
ಬೆಂಗಳೂರು: ಬಾಗಿಲ ಬಳಿ ನಿಲ್ಲಬೇಡ ಎಂದು ಹೇಳಿದ್ದಕ್ಕೆ ಯುವಕನೋರ್ವ BMTC ವೋಲ್ವೋ ಬಸ್ ಕಂಡಕ್ಟರ್ಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿ ನಡೆದಿದೆ. ಅಕ್ಟೋಬರ್ 01ರಂದು ಈ ಘಟನೆ ನಡೆದಿದ್ದು, ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಅಕ್ಟೋಬರ್ 01ರ ಸಂಜೆ 7 ಗಂಟೆ ಸುಮಾರಿಗೆ ಜಾರ್ಖಂಡ್ ಮೂಲದ ಹರ್ಷ್ ಸಿನ್ಹಾ ಎಂಬಾತ ವೈದೇಹಿ ನಿಲ್ದಾಣದಲ್ಲಿ ವೋಲ್ವೋ ಬಸ್ ಹತ್ತಿದ್ದಾನೆ. ಯುವಕ ಬಸ್ ಹತ್ತಿದ್ದ ಬಳಿಕ ಬಾಗಿಲ ಬಳಿ ನಿಲ್ಲದಂತೆ ನಿರ್ವಾಹಕ ಯೋಗೇಶ್ ಸೂಚಿಸಿದ್ದು, ಕುಪಿತಗೊಂಡ ಆರೋಪಿ ಕಂಡಕ್ಟರ್ ಹೊಟ್ಟೆಗೆ ಎರಡರಿಂದ ಮೂರು ಬಾರಿ ಇರಿದಿದ್ದಾನೆ.
ನಿರ್ವಾಕನಿಗೆ ಚಾಕುವಿನಿಂದ ಇರಿದಿದ್ದನ್ನು ಕಂಡು ಪ್ರಯಾಣಿಕರು ಜೋರಾಗಿ ಕೂಗಿಕೊಂಡಿದ್ದು, ಆರೋಪಿ ಹಿಡಿಯುವಷ್ಟರಲ್ಲೇ ಇಳಿದು ಎಸ್ಕೇಪ್ ಆಗಿದ್ದಾನೆ. ಕೂಡಲೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಪ್ರಯಾಣಿಕರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿಯನ್ನು ಸೆರೆಹಿಡಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವೈಟ್ಫೀಲ್ಡ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿ ನಿರುದ್ಯೋಗಿ ಎಂಬುದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.
You must be logged in to post a comment Login