ಬೆಳ್ತಂಗಡಿ ಜೂನ್ 08: ತೆಂಕುತಿಟ್ಟಿನ ಖ್ಯಾತ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಶನಿವಾರ ರಾತ್ರಿ ಹೃದಯಾಘಾತದಿಂದ ಮಂಗಳೂರಿನ ಮನೆಯಲ್ಲಿ ನಿಧನರಾದರು.


ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕ ರಾಗಿ ಸೇವೆ ಸಲ್ಲಿಸಿದ್ದರು. ಧರ್ಮಸ್ಥಳ, ಕರ್ನಾಟಕ, ಸಸಿಹಿತ್ಲು ಮೇಳಗಳಲ್ಲಿ ಎಲ್ಲಾ ಸ್ವರೂಪದ ಪಾತ್ರ ಗಳನ್ನು ಅವರು ನಿರ್ವಹಿಸಿದ್ದರು. ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ನುರಿತ ಕಲಾವಿದರಾಗಿದ್ದರು.

Share Information