LATEST NEWS
ಉಳ್ಳಾಲ – ಮೊದಲೇ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಮತ್ತೊಂದು ಹೊಡೆತ – ಆಕಸ್ಮಿಕವಾಗಿ ಬೆಂಕಿ ತಗುಲಿ ಸುಟ್ಟು ಹೋದ ಮನೆ

ಮಂಗಳೂರು ಜೂನ್ 08: ಮನೆಯವರು ಮೆಹಂದಿಗೆ ತೆರಳಿದ್ದ ವೇಳೆ ಆಕಸ್ಮಿಕ ಬೆಂಕಿಗೆ ಹಂಚಿನ ಮನೆ ಸುಟ್ಟುಹೋದ ಘಟನೆ ಜೂನ್ 6ರಂದು ತಡರಾತ್ರಿ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಗಂಬಿಲ ವೈದ್ಯನಾಥನಗರದಲ್ಲಿ ನಡೆದಿದೆ.
ಬಗಂಬಿಲ ವೈದ್ಯನಾಥನಗರ ನಿವಾಸಿ ಸುಶೀಲ ಮಡಿವಾಳಿ ಎಂಬುವರ ಮನೆಯಲ್ಲಿ ಅವಘಡ ನಡೆದಿದೆ. ಘಟನೆ ಸಂದರ್ಭ ಸುಶೀಲಾ ಸೇರಿದಂತೆ ಅವರ ಪುತ್ರಿ ಅಶಾ, ಪತಿ ಜನಾರ್ದನ, ಸುಶಿಲಾ ಸಹೋದರಿ ಮೀರಾ ಅವರು ಮನೆ ಸಮೀಪದ ಸಂಬಂಧಿಕರ ಮೆಹೆಂದಿ ಕಾರ್ಯಕ್ರಮಕೆ ತೆರಳಿದ್ದರು.

ಅಲ್ಲಿಂದ ವಾಪಸಾಗುವಾಗ ಸುಶೀಲಾ ಅವರು ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಮನೆಯೊಳಗೆ ಬೆಂಕಿ ಗೋಚರಿಸಿದೆ. ತಕ್ಷಣವೇ ಮಹೆಂದಿಯಲ್ಲಿ ಭಾಗವಹಿಸಿದ್ದವರನ್ನು ಕರೆದಿದ್ದು, ಸ್ಥಳೀಯರು ಸೇರಿ ಮನೆಯೊಳಗೆ ಇದ್ದ ಗ್ಯಾಸ್ ಸಿಲಿಂಡರನ್ನು ಹೊರಗೆ ಎಸೆದಿದ್ದಾರೆ. ನಂತರ ಬೆಂಕಿ ನಂದಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಅಗ್ನಿ ಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದರು. ಅದಾಗಲೇ ಮನೆಯೊಳಗೆ ಇದ್ದ ಗ್ರೇಂಡರ್, ಪ್ರಿಡ್ಜ್, ಟಿ.ವಿ, ಫ್ಯಾನ್, ಬಟ್ಟೆ, ಕಪಾಟು ಸುಟ್ಟುಕರಕಲಾಗಿದ್ದವು. ಇಡೀ ಕುಟುಂಬ ಮೊದಲೇ ಆರ್ಥಿಕ ಸಂಕಷ್ಟದಲ್ಲಿದ್ದು, ಇದರೊಂದಿಗೆ ಮನೆ ಸುಟ್ಟು ಕರಕಲಾಗಿದ್ದು. ಮನೆಯವರನ್ನು ಬೀದಿ ಪಾಲಾಗಿಸಿದೆ.
1 Comment