ಮನೆಯ ಹತ್ತಿರ ಬೀದಿ ನಾಯಿಗಳ ಕಾಟ ಹಿನ್ನಲೆ ಹೆದರಿದ ಯುವತಿಯೊಬ್ಬಳು ಕೇವಲ 180 ಮೀಟರ್ ದೂರ ಕ್ರಮಿಸಲು ಓಲಾ ಬೈಕ್ ಬುಕ್ ಮಾಡಿದ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.
ಈ ತಂತ್ರಜ್ಞಾನ ಯುಗದಲ್ಲಿ ಜನರು ಹೇಗೆ ಇದನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು,

ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕೆ ಓಲಾ ಬೈಕ್ ಬುಕ್ ಮಾಡಿದ್ದಾರೆ. ಆದರೆ ಕಾರಣ ಹಾಸ್ಯದಾಯಕವಾಗಿದೆ. ಅವರು ಹೋಗುವ ದಾರಿಯಲ್ಲಿ ಬೀದಿನಾಯಿಗಳ ಕಾಟ ಹೆಚ್ಚಿದ್ದ ಕಾರಣ ಮನೆಯ ಹತ್ತಿರ ಬಂದ ಬಳಿಕ ಓಲಾ ಬೈಕ್ ಬುಕ್ ಮಾಡಿದ್ದಾರೆ. ಓಲಾ ಬೈಕ್ ಚಾಲಕ ಈ ರೈಡಿನ ವ್ಲಾಗ್ ಮಾಡಿದ್ದಾರೆ.
ಆಕೆ ಪಾವತಿಸಿದ್ದು ಕೇವಲ 19 ರೂ. ಮಾತ್ರ. ಈ ವೀಡಿಯೊ ಇಲ್ಲಿಯವರೆಗೆ 2.8 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳು ಮತ್ತು 72 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ. ಇನ್ಸ್ಟಾಗ್ರಾಂನಲ್ಲಿ @rohitvlogstar ಖಾತೆಯಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ.
View this post on Instagram