KARNATAKA
ಹಿಂದೂ ಹೆಸರಿಟ್ಟುಕೊಂಡು ದಾವಣಗೆರೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳು ಬೆಂಗಳೂರಲ್ಲಿ ಬಂಧನ
ದಾವಣಗೆರೆ: ಹಿಂದುಗಳ ಹೆಸರಿಟ್ಟುಕೊಂಡು ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.
ದಾವಣಗೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮಹಿಳೆ ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ನೆಲೆಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ. ಪಾಕ್ ಮೂಲದ ಮಹಿಳೆ ಫಾತಿಮಾ ದಾವಣಗೆರೆಯ ಅಲ್ತಾಫ್ ಜೊತೆ ವಿವಾಹವಾಗಿದ್ದಳು.
ಉಳಿದಂತೆ, ಮೊಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಕೂಡ ಪಾಕಿಸ್ತಾನದವನಾಗಿದ್ದಾನೆ. ಹನೀಫ್ ಸೊಸೆ, ಮಗಳು, ಅಳಿಯನನ್ನೂ ಬಂಧಿಸಲಾಗಿದೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ.
ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ. ಅಲ್ತಾಫ್ ಪತ್ನಿ ಫಾತಿಮಾ ಪಾಕ್ ಪ್ರಜೆಯಾಗಿದ್ದಾಳೆ.
ಹಿಂದೂ ಹೆಸರುಗಳನ್ನಿಟ್ಟುಕೊಂಡಿದ್ದ ಆರೋಪಿಗಳು
ಬಂಧಿತರ ಪೈಕಿ ರಶೀದ್ ಅಲಿ ಸಿದ್ದಿಕಿ ಶಂಕರ್ ಶರ್ಮಾ (48) ಎಂದು ಹೆಸರಿಟ್ಟುಕೊಂಡಿದ್ದರೆ, ಆಯೇಷಾ ಹನೀಫ್ @ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ @ ರಾಮ್ ಬಾಬಾ ಶರ್ಮಾ (73) ರುಬೀನಾ @ ರಾಣಿ ಶರ್ಮಾ (61) ಎಂದು ಹೆಸರುಗಳನ್ನಿಟ್ಟುಕೊಂಡಿದ್ದರು.
You must be logged in to post a comment Login