ಕುಮಾರಧಾರಾ ನದಿಯ ತೀರದಲ್ಲಿ ವಾಮಾಚಾರದ ಕುರುಹು ಪತ್ತೆ ಆತಂಕದಲ್ಲಿ ಸ್ಥಳೀಯರು

ಮಂಗಳೂರು ಜನವರಿ 24: ರಾಜ್ಯ ಸರಕಾರ ಮೌಢ್ಯ ವಿರೋಧಿ ಕಾನೂನನ್ನು ಜಾರಿಗೆ ತರುವ ಹಂತದಲ್ಲಿ ಮೌಢ್ಯಗಳ ಆಚರಣೆಯೊಂದು ಬೆಳಕಿಗೆ ಬಂದಿದೆ. ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಿಜಕ್ಕಳ‌ದ ಕುಮಾರಧಾರಾ ನದಿ ತೀರದಲ್ಲಿ ವಾಮಾಚಾರ ಮಾಡಿರುವಂತಹ ಕುರುಹುಗಳು ಪತ್ತೆಯಾಗಿದೆ.

ನಿನ್ನೆ ರಾತ್ರಿ ಈ ಪ್ರದೇಶದಲ್ಲಿ ಅಪರಿಚಿತರು ಈ ವಾಮಾಚಾರ ನಡೆಸಿರಬಹುದು ಎಂದು ಸ್ಥಳೀಯರು ಅಂದಾಜಿಸಿದ್ದಾರೆ. ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿರುವ ಜಾಗದ ಪಕ್ಕದಲ್ಲೇ ಹರಿಯುವ ಕುಮಾರಧಾರಾ ನದಿಯ ತೀರದಲ್ಲಿ ಯಾವುದೋ ಆಚರಣೆಯನ್ನು ಮಾಡಲಾಗಿದೆ. ಇದು ಊರಿಗೆ ಸಂಬಂಧಪಟ್ಟ ಆಚರಣೆಯಾಗಿರಲು ಸಾಧ್ಯವಿಲ್ಲ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದು ಇದರ ಮರ್ಮವೇನು ಎನ್ನುವ ಹುಡುಕಾಟದಲ್ಲಿ ಇದೀಗ ಸ್ಥಳೀಯರಿದ್ದಾರೆ.

Facebook Comments

comments