Connect with us

DAKSHINA KANNADA

ಜನವಸತಿ ಪ್ರದೇಶದಲ್ಲಿ ಕಾಡಾನೆ ಸಂಚಾರ…ತೊಂದರೆ ಕೊಡದೆ ಪ್ರತೀ ವರ್ಷ ಇದೇ ಮಾರ್ಗದಲ್ಲಿ ಸಂಚಾರ

ಸುಳ್ಯ ಜನವರಿ 28: ಸುಳ್ಯ ತಾಲೂಕಿನ ಪೆರಾಜೆ ಬಿಳಿಯಾರು ಪ್ರದೇಶದಲ್ಲಿ ಕಾಡಾನೆಯೊಂದು ಸಂಚಾರ ನಡೆಸಿದ್ದು, ಜನರಲ್ಲಿ ಆತಂಕ ಎದುರಾಗಿದೆ. ಸಾರ್ವಜನಿಕರ ಮಾಹಿತಿ ಪ್ರಕಾರ ಈ ಆನೆಯು ಪ್ರತೀ ವರ್ಷವು ಕಡಬದ ಸುಬ್ರಹ್ಮಣ್ಯ ವಲಯದಿಂದ ಸುಳ್ಯದ ಪಂಜ ಮೂಲಕ ಮಡಿಕೇರಿಯ ಭಾಗಮಂಡಲ ವರೆಗೂ ಇದೇ ದಾರಿಯಲ್ಲಿ ಸಂಚರಿಸುತ್ತದೆ ಎನ್ನಲಾಗಿದೆ.


ಆದರೆ ಆನೆ ಈ ತನಕ ಜನರಿಗೆ ತೊಂದರೆ ನೀಡಿದ ಮಾಹಿತಿ ಇಲ್ಲ. ಹಾದು ಹೋಗುವ ದಾರಿಯಲ್ಲಿ ಹೊಟ್ಟೆ ಹಸಿವು ಆದಾಗ ಬಾಳೆ,ತೆಂಗು ಸೇರಿದಂತೆ ಬೈನೆ ಮರಗಳನ್ನು ತಿನ್ನುತ್ತಿದೆ ಎನ್ನಲಾಗಿದೆ. ಭಾಗಮಂಡಲ ವರೆಗೂ ಹೋದ ಆನೆ ನಂತರದಲ್ಲಿ ಫೆಬ್ರವರಿ ತಿಂಗಳ ಮಧ್ಯದಲ್ಲಿ ಅದೇ ದಾರಿಯಲ್ಲಿ ವಾಪಾಸು ಬರುತ್ತದೆ ಎನ್ನಲಾಗಿದೆ. ಆನೆ ಹೋಗುವ ದಾರಿಯಲ್ಲಿ ಸಿಗುವ ಕುಮಾರಧಾರಾ ನದಿ ಹಾಗೂ ಪಯಸ್ವಿನಿ ನದಿಯನ್ನೂ ಆನೆ ಈಜುವ ಮೂಲಕ ನದಿ ದಾಟುತ್ತದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದ್ದಾರೆ.


ಈ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಆರ್.ಎಫ್.ಓ ಗಿರೀಶ್ ಅವರು ಆನೆಯೂ ಅದರ ಪಾಡಿಗೆ ಅದು ತನ್ನ ದಾರಿಯಲ್ಲೇ ಸಂಚಾರ ಮಾಡುತ್ತಿದ್ದು,ಯಾರಿಗೂ ತೊಂದರೆ ನೀಡಿದ ಮಾಹಿತಿ ಇಲ್ಲ. ಆದರೂ ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ಸಂಚರಿಸುವ ಜನರು ಎಚ್ಚರಿಕೆ ವಹಿಸಬೇಕು. ಮತ್ತು ತೊಂದರೆಗಳು ಕಂಡು ಬಂದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ವಿನಂತಿ ಮಾಡಿದ್ದಾರೆ.