Connect with us

  DAKSHINA KANNADA

  ಜನವರಿ 22 ರಂದು ಹಿಂದೂಗಳು ವ್ಯಾಪಾರ ವ್ಯವಹಾರಕ್ಕೆ ಬಿಡುವು ನೀಡಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಎಚ್ ಪಿ ಮನವಿ

  ಪುತ್ತೂರು ಜನವರಿ 19: ಅಯೋಧ್ಯೆಯಲ್ಲಿ ಜನವರಿ 22 ರಂದು ಶ್ರೀರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆಯು ಮಧ್ಯಾಹ್ನ 12.20 ರ ಶುಭಮುಹೂರ್ತದಲ್ಲಿ ನೆರವೇರಲಿದೆ. ಇಂತಹ ಅಪೂರ್ವ ಹಾಗೂ ಪವಿತ್ರ ಸಂದರ್ಭದಲ್ಲಿ ಪೂರ್ವಾಹ್ನ 11 ಗಂಟೆಯಿಂದ 1.30 ಗಂಟೆಯವರೆಗೆ ಎಲ್ಲಾ ಹಿಂದೂಗಳು ತಮ್ಮ ವ್ಯವಹಾರ, ವಹಿವಾಟುಗಳಿಗೆ ಬಿಡುವು ನೀಡಿ ಸ್ಥಳೀಯ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ವಿಶ್ವ ಹಿಂದೂ ಪರಿಷತ್ ಮನವಿ ಮಾಡಿದೆ.


  ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕ್ಷತೆ ವಿತರಣೆಯ ಜಿಲ್ಲಾ ಸಂಯೋಜಕರಾದ ವಿಹಿಂಪ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ ಹಾಗೂ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ವಿಭಾಗ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ಮಾತನಾಡಿ ಮರ್ಯಾದಾ ಪುರುಷೋತ್ತಮ ಹಿಂದೂಗಳಿಗೆ ಆದರ್ಶಪ್ರಾಯರಾದ ಶ್ರೀರಾಮನ ಪ್ರತಿಷ್ಠೆಯನ್ನು ಅತ್ಯಂತ ಸಂತೋಷದಿಂದ ಆಚರಿಸೋಣ ಎಂದರು. ಎಲ್ಲರೂ ತಮ್ಮ ಮನೆಗಳಲ್ಲಿ, ಅಂಗಡಿಗಳಲ್ಲಿ ವಾಹನಗಳಲ್ಲಿ ಹಾಗೂ ಕಚೇರಿಗಳಲ್ಲಿ ಅಂದು ಬೆಳಗ್ಗಿನಿಂದಲೇ ಭಗವಧ್ವಜವನ್ನು ಹಾರಿಸಬೇಕು ಮತ್ತು ಶ್ರೀರಾಮ ಭಾವಚಿತ್ರವನ್ನಿರಿಸಿ ಪೂಜಿಸಬೇಕು ಎಂದು ವಿನಂತಿಸಿದರು.

  ಆ ದಿನ ರಾತ್ರಿ ಎಲ್ಲಾ ಹಿಂದೂ ಬಾಂಧವರು ತಮ್ಮ ಮನೆಗಳಲ್ಲಿ ದೀಪಾವಳಿ ರೀತಿಯಲ್ಲಿ ಆಚರಿಸಲು ಈಗಾಗಲೇ ಪ್ರಧಾನಿಯವರು ಕರೆ ನೀಡಿದ್ದಾರೆ. ಮನೆಗಳಿಗೆ ಅಕ್ಷತೆಯ ಜತೆಗೆ ನೀಡಲಾದ ಪತ್ರಕದಲ್ಲೂ ವಿವರಿಸಲಾಗಿದೆ. ಕನಿಷ್ಠ ಐದು ದೀಪಗಳನ್ನು ಬೆಳಗಿಸಿ ಅನಂತರ ಉತ್ತರಾಭಿಮುಖವಾಗಿ ಅಯೋಧ್ಯೆಯ ದಿಕ್ಕಿನಲ್ಲಿ ಆರತಿ ಬೆಳಗಿ ಶ್ರೀರಾಮನನ್ನು ಆರಾಧಿಸುವಂತೆ ಹಿಂದೂಗಳಲ್ಲಿ ವಿನಂತಿಸಿದರು.

  Share Information
  Advertisement
  Click to comment

  You must be logged in to post a comment Login

  Leave a Reply