DAKSHINA KANNADA
ಸುಳ್ಯ – ತಾಯಿಯಿಂದ ಬೇರ್ಪಟ್ಟು ರಸ್ತೆ ಬದಿ ನಿಂತಿದ್ದ ಮರಿ ಆನೆ ರಕ್ಷಣೆ
ಸುಳ್ಯ ಜನವರಿ 19: ಮರಿ ಆನೆಯೊಂದು ಆನೆಗಳ ಗುಂಪಿನಿಂದ ಬೇರ್ಪಟ್ಟ ಘಟನೆ ಸುಳ್ಯ ತಾಲೂಕಿನ ಮಂಡೆಕೋಲು ಕನ್ಯಾನದಲ್ಲಿ ನಡೆದಿದೆ.
ಮಂಡೆಕೋಲು ಪರಿಸರದಲ್ಲಿದ್ದ ಆನೆಗಳ ಹಿಂಡು ಒಂದು ಬೀಡು ಬಿಟ್ಟಿತ್ತು. ಈ ನಡುವೆ ಈ ಆನೆಗಳ ಹಿಂಡಿನಿಂದ ಮರಿ ಆನೆಯೊಂದು ತಪ್ಪಿಸಿಕೊಂಡಿದೆ. ತಪ್ಪಿಸಿಕೊಂಡ ಮರಿ ಆನೆ ರಸ್ತೆ ಬದಿಯಲ್ಲಿ ನಿಂತಿದ್ದು, ಸಾರ್ವಜನಿಕರು ಮರಿ ಆನೆಯನ್ನು ನೋಡಿ ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಮರಿ ಆನೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಆನೆ ಅರಣ್ಯಾಧಿಕಾರಗಳ ಸುಪರ್ದಿಯಲ್ಲಿದೆ.
You must be logged in to post a comment Login