Connect with us

  KARNATAKA

  ಅನಂತ ಕುಮಾರ್ ಹೆಗಡೆ ವಿರುದ್ಧ ಸಿಡಿದೆದ್ದ ಬಿಜೆಪಿ ಕಾರ್ಯಕರ್ತರು, ಮೌನಕ್ಕೆ ಶರಣಾದ ಸಂಸದ..!

   

  ಬೆಳಗಾವಿ :  ಇತ್ತೀಚಿನ ದಿನಗಳಲ್ಲಿ ಕಾಂಟ್ರವರ್ಸಿಗಳಿಂದ   ಸದಾ ಸುದ್ದಿಯಲ್ಲಿರುವ ಸಂಸದ ಅನಂತಕುಮಾರ ಹೆಗಡೆ ಬೆಳಗಾವಿಯ ಖಾನಾಪುರಕ್ಕೆ ಭೇಟಿ ನೀಡಿದ ವೇಳೆ ಪಕ್ಷದ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ‌.

  ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಖಾನಾಪುರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿದ್ದು ಸಂಸದರ ಸಮ್ಮುಖದಲ್ಲೇ ಪಕ್ಷದ ಕಾರ್ಯಕರ್ತರು ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪುರನಲ್ಲಿ ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರು. ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಆಪ್ತ ಸಹಾಯಕರು ಕೂಡ ಸರಿಯಾಗಿ ಸ್ಪಂದಿಸಿಲ್ಲ,ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡಿವೆ. ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದರು. ಖಾನಾಪುರ ತಾಲೂಕಿನ ಜನ ಬೆಳಗಾವಿಗೆ ಹೋದರೆ ಕಾರವಾರ ಹೋಗಿ ಅಂತಾರೆ.ಕಾರವಾರ ಹೋದರೆ ನೀವು ಬೆಳಗಾವಿ ಜಿಲ್ಲೆಯವರು ಅಲ್ಲಿಗೆ ಹೋಗಿ ಅಂತಾರೆ. ಇದರಿಂದಾಗಿ ಖಾನಾಪುರ ತಾಲೂಕಿನ ಜನ ಒದ್ದಾಡುವಂತಾಗಿದೆ..
  ಆರು ಬಾರಿ ಸಂಸದರಾಗಿದ್ದಿರಿ ಖಾನಾಪುರದಲ್ಲಿ ಕೇಂದ್ರ ಸರ್ಕಾರದ ಯೋಜನೆ ಎನೂ ತಂದಿಲ. ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಸ್ಪಂದನೆ ಸಿಗುತ್ತಿಲ್ಲ.ಅನಂತಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತಾ ಜನ ಪ್ರಶ್ನೆ ಮಾಡ್ತಿದ್ದಾರೆ. ನಿಮ್ಮನ್ನ ಭೇಟಿಯಾಗಲು ನಾವು ಇಲ್ಲಿದ್ದಂ ,200ಕಿಲೋ ಮೀಟರ್  ಬಂದರು ಸಿಗುವುದಿಲ್ಲ. ಎಂದು ತರಾಟೆಗೆ ತಗೊಂಡರು.

  ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಸಂಸದ ಅನಂತಕುಮಾರ ಹೆಗಡೆ ಅವರು ನಾನು ಈಗ ಇಲ್ಲಿಗೆ ಬಂದಿರುವುದು ಚುನಾವಣೆಗಾಗಿ ಅಲ್ಲ. ಹೈಕಮಾಂಡ ಟಿಕೆಟ್ ಯಾರಿಗೆ ಕೊಡತ್ತಾರೆ ಎನ್ನುದು ಗೊತ್ತಿಲ್ಲ.ಆದರೆ ಮೋದಿ ಅವರನ್ನ ಮೊತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ,ಆ ಕಾರಣಕ್ಕಾಗಿ ಎಲ್ಲಾ ಕಡೆ ಓಡಾಟ ನಡೆಸುತ್ತಿದ್ದೆನೆ.ಕೆಲವೊಂದು ನನ್ನ ವೈಯಕ್ತಿಕ ಕಾರಣದಿಂದ ಓಡಾಟ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು.

  ಮೊದಮೊದಲು ಕಾರ್ಯಕರ್ತರ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದ ಸಂಸದ ಹೆಗಡೆ, ಬಳಿಕ ಕೆಲ ಕಾರ್ಯಕರ್ತರು ಆಕ್ರೋಶದಿಂದ ಕೇಳಿದ ಪ್ರಶ್ನೆಗಳಿಗೆ ನಿರುತ್ತರರಾದರು. ಕ್ಷೇತ್ರದ ಅಭಿವೃದ್ಧಿಯ ವಿಷಯವಾಗಿ ಕೇಳಿದ ಕೆಲವು ಪ್ರಶ್ನೆಗಳಿಗೆ ಅವರು ಉತ್ತರಿಸಲು ನಿರಾಕರಿಸಿದರು. ಕೊನೆಯಲ್ಲಿ ಅವರು ಧಾರ್ಮಿಕ ವಿಷಯ, ಹಿಂದುತ್ವವಾದ, ರಾಮಮಂದಿರ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊಂಡು ಹತ್ತು ನಿಮಿಷಗಳ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರವನ್ನು ಹೊಗಳಿದರು.

  ಶಾಸಕ ವಿಠ್ಠಲ ಹಲಗೇಕರ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೋಚೇರಿ, ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಧನಶ್ರೀ ದೇಸಾಯಿ, ಮುಖಂಡರಾದ ವಿಜಯ ಕಾಮತ, ಬಾಬುರಾವ್ ದೇಸಾಯಿ, ಗಜು ರೇಮಾಣಿ, ಸುರೇಶ ದೇಸಾಯಿ, ಸದಾನಂದ ಪಾಟೀಲ, ಪಂಡಿತ ಓಗಲೆ, ಕಿರಣ ಯಳ್ಳೂಕರ ಇದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply