DAKSHINA KANNADA
ಸೆಕ್ಯುರಿಟಿಗಾರ್ಡ್ 6ನೇ ಮಹಡಿಯಿಂದ ಬಿದ್ದು ಮೃತ್ಯು
ಉಳ್ಳಾಲ, ಜನವರಿ 26 : ಕರ್ತವ್ಯ ನಿರತ ಸೆಕ್ಯುರಿಟಿಗಾರ್ಡ್ ಓರ್ವರು ಕಟ್ಟಡದ ಆರನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ಸಾವನ್ನಪ್ಪಿರುವ ಘಟನೆ ಉಳ್ಳಾಲದಲ್ಲಿ ನಡೆದಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಯೆನೆಪೋಯ ಬಳಿಯ ಹಸನ್ ಛೇಂಬರ್ಸ್ ಕಟ್ಟಡದಲ್ಲಿ ನಿನ್ನೆ ಸೋಮವಾರ ತಡರಾತ್ರಿ ವೇಳೆ ನಡೆದಿದೆ. ಕುತ್ತಾರು ಮಜಲುತೋಟ ನಿವಾಸಿ ಸತೀಶ್ (38) ಮೃತರು. ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದ ಸತೀಶ್ ಆರನೇ ಮಹಡಿಗೆ ತೆರಳಿ ಲಿಫ್ಟ್ ಪರಿಶೀಲನೆಗೆ ತೆರಳಿದ್ದರು.
ಈ ವೇಳೆ ಆಯತಪ್ಪಿ ಆರನೇ ಮಹಡಿಯಿಂದ ಕೆಳಗೆ ಬಿದ್ದ ಸತೀಶ್ ತಲೆಗೆ ಗಂಭೀರ ಗಾಯಗೊಂಡು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹೋದ್ಯೋಗಿಯೋರ್ವರು ಅಪಾಯದ ಮುನ್ಸೂಚನೆ ನೀಡಿದ್ದರೂ ಸತೀಶ್ ತೆರಳಿದ್ದರೆನ್ನಲಾಗಿದೆ. ಕೊಣಾಜೆ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.