LATEST NEWS
ಇಲ್ಯಾಸ್ ಹತ್ಯೆ ಆರೋಪಿಗಳ ಸುಳಿವು ಲಭ್ಯ -ಪೊಲೀಸ್ ಕಮಿಷನರ್

ಇಲ್ಯಾಸ್ ಹತ್ಯೆ ಆರೋಪಿಗಳ ಸುಳಿವು ಲಭ್ಯ -ಪೊಲೀಸ್ ಕಮಿಷನರ್
ಮಂಗಳೂರು ಜನವರಿ 13: ಮಂಗಳೂರಲ್ಲಿ ಟಾರ್ಗೆಟ್ ಗುಂಪಿನ ರೌಡಿ ಇಲ್ಯಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯ ಆರೋಪಿಗಳ ಸುಳಿವು ಲಭ್ಯವಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ತಿಳಿಸಿದ್ದಾರೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇಲ್ಯಾಸ್ ಮೂರು ದಿನಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದು, ಇಲ್ಯಾಸ್ ನ ಮೇಲೆ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಇಲ್ಯಾಸ್ ಪತ್ನಿ ನೀಡಿದ ದೂರಿನಂತೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಇಲ್ಯಾಸ್ ಟಾರ್ಗೇಟ್ ಗ್ರೂಪ್ ನಲ್ಲಿದ್ದು, ಇದೇ ತಂಡದಲ್ಲಿ ದಾವೂದ್ ಹಾಗೂ ಸಫ್ವಾನ್ ಇಬ್ಬರು ಪ್ರತ್ಯೇಕ ಗೊಂಡು ಇತನ ಮೇಲೆ ದ್ವೇಷ ಸಾಧಿಸುತ್ತಿದ್ದರು. ಇದೇ ಇಲ್ಯಾಸ್ ನ ಹತ್ಯೆಗೆ ಕಾರಣವಾಗಿರಬಹುದೆಂದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಶಂಕಿತರ ಫೋಟೋಗಳ ಮೂಲಕ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದ್ದು ಶೀಘ್ರವೇ ಆರೋಪಿಗಳನ್ನ ಬಂಧಿಸಲಾಗುವುದೆಂದು ಮಂಗಳೂರಲ್ಲಿ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.