Connect with us

    LATEST NEWS

    ಗೃಹ ಸಚಿವರ ಸಭೆಯ ತಕ್ಷಣವೇ ಉರುಳಿತು ಇನ್ನೊಂದು ಹೆಣ, ದುಷ್ಕೃತ್ಯ ನಡೆಸಿತೇ ಟಾರ್ಗೆಟ್ ವಿರೋಧಿ ಬಣ

    ಗೃಹಸಚಿವರ ಸಭೆಯ ತಕ್ಷಣವೇ ಉರುಳಿತು ಇನ್ನೊಂದು ಹೆಣ, ದುಷ್ಕೃತ್ಯ ನಡೆಸಿತೇ ಟಾರ್ಗೆಟ್ ವಿರೋಧಿ ಬಣ

    ಮಂಗಳೂರು, ಜನವರಿ 13 : ಕುಖ್ಯಾತ ರೌಡಿ ಟಾರ್ಗೆಟ್ ಇಲ್ಯಾಸ್ ನನ್ನು ಹಾಡುಹಗಲೇ ದುಷ್ಕರ್ಮಿಗಳು ಕೊಚ್ಚಿ ಕೊಲೆಗೈದಿದ್ದಾರೆ.

    ಮಂಗಳೂರಿನ ಜಪ್ಪು ಕುಡ್ಪಾಡಿ ಮಸೀದಿಯ ಪಕ್ಕದಲ್ಲೇ ಇರುವ ಮಿಸ್ತಾ ಗಲೋರೆ ಎನ್ನುವ ಅಪಾರ್ಟ್ ಮೆಂಟ್ ನಲ್ಲಿ ಇಂದು ಮುಂಜಾನೆ 9 ಗಂಟೆ ಸುಮಾರಿಗೆ ಇಲ್ಯಾಸ್ ನನ್ನು  ಟಾರ್ಗೆಟ್ ಮಾಡಿ ಕೊಲೆ ಮಾಡಿದ್ದಾರೆ.

    ಕೊಲೆ, ದರೋಡೆ, ಸುಲಿಗೆ, ಅಪಹರಣ, ಅತ್ಯಾಚಾರ, ಗಾಂಜಾ ಸೇರಿದಂತೆ 23 ಕ್ಕೂ ಮಿಕ್ಕಿದ ಪ್ರಕರಣಗಳು ಈತನ ಮೇಲೆ ದಾಖಲಾಗಿದೆ.

    ಉಳ್ಳಾಲದಲ್ಲಿ ಟಾರ್ಗೆಟ್ ಎನ್ನುವ ರೌಡಿಗಳ ತಂಡ ಕಟ್ಟಿಕೊಂಡು ಅಕ್ರಮ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದ ಈತ ಉಳ್ಳಾಲ ಬ್ಲಾಕ್ ಯುವ ಕಾಂಗ್ರೇಸ್ ನ ಉಪಾಧ್ಯಕ್ಷನಾಗಿಯೂ ಕಾರ್ಯನಿರ್ವಹಿಸುತ್ತಿದ್ದ.

    2012 ರಲ್ಲಿ ಮಂಗಳೂರು ಹೊರವಲಯದಲ್ಲಿ ನಡೆದ ದೇರಳಕಟ್ಟೆಯ ವೈದ್ಯಕೀಯ ವಿದ್ಯಾರ್ಥಿಗಳನ್ನು ಅಪಹರಿಸಿ ಅವರ ಅಶ್ಲೀಲವಾಗಿ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಈತನ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೋಲೀಸರು ಈತನನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದರು.

    ಯುವತಿಯರನ್ನು ಬಳಸಿ ಶ್ರೀಮಂತ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಅವರನ್ನು ಹನಿಟ್ರ್ಯಾಪ್ ಮೂಲಕ ದೋಚುವುದರಲ್ಲೂ ಈ ಟಾರ್ಗೆಟ್ ಗ್ರೂಪ್ ತೊಡಗಿಕೊಂಡಿತ್ತು.

    ಉಳ್ಳಾಲ ಪರಿಸರದಲ್ಲಿ ಗಾಂಜಾ ವ್ಯವಹಾರದಲ್ಲಿ ತೊಡಗಿದ್ದ ಇಲ್ಯಾಸ್ ವಿರುದ್ಧ ಧ್ವನಿಯೆತ್ತಿದ್ದ ಜುಬೈರ್ ಎಂಬಾತನನ್ನು ಕೊಲೆಗೈದ ಪ್ರಕರಣದಲ್ಲೂ ಈತ ಪ್ರಮುಖ ಆರೋಪಿಯಾಗಿದ್ದ.

    ಜಿಲ್ಲೆಯ ಸಚಿವರಾದ ಯು.ಟಿ.ಖಾದರ್ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಈತನ ಉಪಟಳವು ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿತ್ತು.

    ಈತನ ವಿರುದ್ಧ ಪೋಲೀಸರು ಗೂಂಡಾ ಕಾಯ್ದೆಯನ್ನೂ ಹಾಕಿದ್ದರು.

    ರಾಜಕೀಯ ವ್ಯಕ್ತಿಗಳ ಒಡನಾಟ ಇರುವ ಕಾರಣ ಈತ ಪೋಲೀಸರ ಕಾರ್ಯಾಚರಣೆಯಿಂದ ನಿರಂತರವಾಗಿ ತಪ್ಪಿಸಿಕೊಳ್ಳುತ್ತಿದ್ದ.

    ಕಾನೂನು ಸುವ್ಯವಸ್ಥೆಯ ಕುರಿತು ಮಂಗಳೂರಿನಲ್ಲಿ ಸಭೆ ನಡೆಸಿ ಗೃಹಸಚಿವ ರಾಮಲಿಂಗಾರೆಡ್ಡಿ ಬೆಂಗಳೂರು ತಲುಪುವ ಮೊದಲೇ ಜಿಲ್ಲೆಯಲ್ಲಿ ಮತ್ತೊಂದು ಹೆಣ ಉರುಳಿರುವುದು ಜಿಲ್ಲೆಯ ಜನತೆಯನ್ನು ಆತಂಕಕ್ಕೀಡು ಮಾಡಿದೆ.

    ದಕ್ಷಿಣಕನ್ನಡ ಜಿಲ್ಲೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಭೇಟಿ ನೀಡುವ ಮೊದಲು ಜಿಲ್ಲೆಯಲ್ಲಿ ಕೊಲೆಗಳು ನಡೆಯುತ್ತಿದ್ದು, ಇದೀಗ ಗೃಹಸಚಿವರು ಭೇಟಿ ನೀಡಿದ ಬಳಿಕ ಕೊಲೆ ನಡೆಯುತ್ತಿರುವುದು ಕಾನೂನು ಸುವ್ಯವಸ್ಥೆಯು ಎಷ್ಟರಮಟ್ಟಿಗೆ ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿಯಂತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply