LATEST NEWS
ಮುಂಬೈ : 40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿ ನಾಲ್ವರು ಸಾವು, ಹಲವಾರು ನಾಪತ್ತೆ
ಮುಂಬೈ : 40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿ ನಾಲ್ವರು ಸಾವು, ಹಲವಾರು ನಾಪತ್ತೆ
ಮುಂಬೈ,ಜನವರಿ 13: 40 ವಿದ್ಯಾರ್ಥಿಗಳಿದ್ದ ದೋಣಿ ಮಗುಚಿ ಬಿದ್ದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು 15 ಕ್ಕೂ ಅಧಿಕ ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ.
ಇಂದು ಬೆಳಗ್ಗೆ 11.30 ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಮುಂಬೈ ನಗರದಿಂದ 100 ಕಿ.ಮೀ ದೂರದಲ್ಲಿರುವ ದಹಾನು ಕರಾವಳಿಯ ಸಮುದ್ರದಲ್ಲಿ ಎರಡು ನಾಟಿಕಲ್ ಮೈಲು ದೂರದಲ್ಲಿ ದೋಣಿ ಮಗುಚಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
6 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. 30ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ನಾಪತ್ತೆಯಾಗಿರುವ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಕರಾವಳಿ ರಕ್ಷಣಾ ಪಡೆ ಸಹಿತ ಅನೇಕ ರಕ್ಷಣಾ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
You must be logged in to post a comment Login