ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.
ಕಡಬ, ಡಿಸೆಂಬರ್ 13: ತಾಲೂಕಿನ ರಾಮಕುಂಜದ ಕಾರ್ಜಾಲು ಎಂಬಲ್ಲಿ ತೋಟದ ಕೆರೆಗೆ ಕಾಡುಕೋಣ ಬಿದ್ದ ಘಟನೆ ನಡೆದಿದೆ. ರಾಮಕುಂಜದ ಕಾರ್ಜಾಲು ಎಂಬಲ್ಲಿ ಹೊನ್ನಪ್ಪ ಗೌಡ ಎನ್ನುವವರಿಗೆ ಸೇರಿದ ತೋಟದ ಕೆರೆಗೆ ಆಹಾರ ಅರಸಿ ಕೃಷಿ ತೋಟಕ್ಕೆ...
ಕಡಬ, ಜುಲೈ 30: ಕಾಡಾನೆ ಹಿಂಡು ದಾಳಿ ಮಾಡಿ ಅಡಿಕೆ ತೋಟ, ಜೇನು ಕೃಷಿ ಸಹಿತ ಒಂದು ಸ್ಕೂಟರ್ ಧ್ವಂಸ ಮಾಡಿದ ಘಟನೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಅಡೆಂಜ ಭಾಗದಲ್ಲಿ ನಡೆದಿದೆ. ಲಕ್ಷ್ಮಣ ಪೆತ್ತಲಾ,...
ಕೊಡಗು, ಜೂನ್ 01: ಕಾಡಾನೆಯನ್ನು ಸೆರೆಹಿಡಿಯುವ ವೇಳೆ ಆರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕಾಡಾನೆ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚೆಯ್ಯಂಡಾಣೆ ಸಮೀಪದ ಮರಂದೋಡುವಿನಲ್ಲಿ ನಡೆದ ಘಟನೆ ನಡೆದಿದ್ದು ಕಾಡಾನೆ ಸಾವಿಗೆ ಸ್ಥಳೀಯರು ಆಕ್ರೋಶ...
ಪುತ್ತೂರು, ಮಾರ್ಚ್ 17: ನರಿಮೊಗರು ಗ್ರಾಮದ ಗಡಿಪ್ಪಿಲ ರೈಲ್ವೆ ಹಳಿಯಲ್ಲಿ ಕಾಡುಕೋಣ ಮತ್ತು ಅದರ ಮರಿ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಮ.17ರಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ಕೃಷಿ ತೋಟಗಳಿಗೆ ಮೇವು ಅರಸಿ ಬಂದಿದ್ದ...
ಮಂಗಳೂರು, ಅಕ್ಟೋಬರ್ 04: ಮಂಗಳೂರು ನಗರದಲ್ಲಿ ಚಿರತೆಯ ಓಡಾಟ ಜೋರಾಗಿದ್ದು ನಗರದ ಮರೋಳಿ ಎಂಬಲ್ಲಿ ಚಿರತೆಯ ಓಡಾಟ ಪತ್ತೆಯಾಗಿದೆ. ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ಚಿರತೆಯ ಓಡಾಟ ಕಂಡು ಬಂದಿದ್ದು, ಮಂಗಳೂರು ಅರಣ್ಯ...
ಕುಂದಾಪುರ, ಮೇ 26: ತಾಲೂಕಿನ ಕೊಡ್ಲಾಡಿಯಲ್ಲಿ ನೀರಿನ ಟ್ಯಾಂಕ್ ಒಳಗೆ ಬಿದ್ದ ಚಿರತೆಯನ್ನು ಅರಣ್ಯಧಿಕಾರಿಗಳು ರಕ್ಷಿಸಿದ ಘಟನೆ ಮಂಗಳವಾರ ನಡೆದಿದೆ. ಕೊಡ್ಲಾಡಿಯ ಚಂದ್ರ ಶೆಟ್ಟಿಯವರ ಮನೆಯ ನೀರಿನ ಟ್ಯಾಂಕ್ ಗೆ ೫ ವರ್ಷದ ಗಂಡು ಚಿರತೆ...
ಉಡುಪಿ, ಮೇ 17: ನಗರದ ಸಗ್ರಿ ವಾರ್ಡ್ ನ ಹಯಗ್ರೀವ ನಗರದಲ್ಲಿ ಜಿಂಕೆಯ ಮೃತ ದೇಹ ಪತ್ತೆಯಾಗಿದೆ. ನಗರ ಪ್ರದೇಶದಲ್ಲಿ ಜಿಂಕೆ ಓಡಾಟ ಕಂಡು ಜನರಲ್ಲಿ ಅಚ್ಚರಿ ಉಂಟಾಗಿದೆ. ರಾತ್ರಿ ಹೊತ್ತು ವಾಹನ ಅಪಘಾತದಿಂದ ಮೃತಪಟ್ಟಿರುವ...
ಬೆಳ್ತಂಗಡಿ, ಮೇ 16: ತಾಲೂಕಿನ ಗರ್ಡಾಡಿ ಪ್ರದೇಶದಲ್ಲಿ ನೀರು ನಾಯಿಗಳ ಗುಂಪು ಕಂಡು ಬಂದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗರ್ಡಾಡಿ ಸನಿಹದ ಕುಬಳಬೆಟ್ಟು ಗುತ್ತು ಎಂಬಲ್ಲಿನ ತೋಡಿನಲ್ಲಿ ಸುಮಾರು 25 ಕ್ಕೂ ಹೆಚ್ಚು ನೀರು ನಾಯಿಗಳು...
ಸುಳ್ಯ, ಮೇ 04: ಕೇರಳದ ಕಾಸರಗೋಡಿನಿಂದ ಸುಳ್ಯ ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಇಡ್ತಲೆ ಹಾವು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಐವರು ಕೇರಳ ಮೂಲದವರನ್ನು ಮಂಡೆಕೋಲು ಗ್ರಾಮದ ಮುರೂರು ರಾಜ್ಯ ಹೆದ್ದಾರಿಯಲ್ಲಿ ವಶಪಡಿಸಿಕೊಂಡ ಘಟನೆ ವರದಿಯಾಗಿದೆ....