Connect with us

    DAKSHINA KANNADA

    ಕಡಬ: ಕಾಡಾನೆ ಜೊತೆಗೆ ಚಿರತೆ ಹಾವಳಿ- ರಬ್ಬರ್ ಮರದ ಮೇಲೆ ಅರ್ಧ ತಿಂದ ಆಡಿನ ಕಳೆಬರಹ ಪತ್ತೆ..!

    ಕಡಬ, ಮಾರ್ಚ್ 17:  ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಕಾಡಾನೆಗಳ ಸಂಕಷ್ಟದ ಜೊತೆಗೆ ಚಿರತೆ ಹಾವಳಿಯ ಪ್ರಕರಣ ವರದಿಯಾಗುತ್ತಿದ್ದು, ಇಲ್ಲಿನ ಸ್ಥಳೀಯ ನಿವಾಸಿಗಳು ಜೀವ ಭಯದಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಇಲ್ಲಿನ ಬೆತ್ತೋಡಿ ಎಂಬಲ್ಲಿ ರಬ್ಬರ್ ಮರದ ಮೇಲೆ ಮೆಕೆಯ ಅರ್ಧ ತಿಂದ ಕಳೆಬರಹ ಪತ್ತೆಯಾಗಿದ್ದು ಚಿರತೆ ಹಾವಳಿ ಇದೆ ಎಂಬುವುದಕ್ಕೆ ಇದು ಸ್ಪಷ್ಟ ನಿದರ್ಶನವಾಗಿ ನಿಂತಿದೆ.

    ಇನ್ನು ಇತ್ತೀಚೆಗಷ್ಟೆ ಇಲ್ಲಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಕು ನಾಯಿಯನ್ನು ಚಿರತೆ ಹಿಡಿದ ಪ್ರಕರಣ ವರದಿಯಾಗಿತ್ತು. ಇದೇ ಭಾಗದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಸಾವನ್ನಪ್ಪಿದ್ದು, ಈ ನಿಟ್ಟಿನಲ್ಲಿ ಆರಂಭವಾದ ಎಲಿಫಂಟ್ ಆಪರೇಷನ್ ಕಾರ್ಯಾಚರಣೆಯೂ ಸದ್ಯ ಸ್ಥಗಿತಗೊಂಡಿದೆ.

    ಹೀಗಾಗಿ ದಿನಂಪ್ರತಿ ಆನೆಗಳ ಹಿಂಡುಗಳು ಕೃಷಿ ನಾಶಪಡಿಸುತ್ತಿವೆ. ಒಂದು ಕಡೆ ಕಾಡಾನೆ, ಇನ್ನೊಂದು ಕಡೆ ಚಿರತೆ , ಹಾವುಗಳ ದಾಳಿಯಿಂದಾಗಿ ಕಡಬ ತಾಲೂಕಿನ ಜನತೆ ಕಂಗೆಟ್ಟಿದ್ದು ಸಂಬಂಧಪಟ್ಟ ಅಧಿಕಾರಿಗಳು , ಜನಪ್ರತಿನಿಧಿಗಳು ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply