LATEST NEWS
ಕಾರಿನ ಮೇಲೆ ನಿಂತು ಬರ್ತ್‌ಡೇ ಪಾರ್ಟಿ: ಯುಟ್ಯೂಬರ್ ಪ್ರಿನ್ಸ್ ದೀಕ್ಷಿತ್ ಬಂಧನ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ನವದೆಹಲಿ, ಮಾರ್ಚ್ 17: ಕಾರಿನ ಮೇಲೆ ನಿಂತು ಹುಟ್ಟುಹಬ್ಬ ಆಚರಿಸಿಕೊಳ್ಳುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಯುಟ್ಯೂಬರ್ ಪ್ರಿನ್ಸ್ ದೀಕ್ಷಿತ್‌ನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
2022ರ ನವೆಂಬರ್ 16ರಂದು ತನ್ನ ಹುಟ್ಟುಹಬ್ಬದಂದು ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಚಲಿಸುವ ಕಾರಿನ ಮೇಲೆ ನಿಂತುಕೊಂಡು ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ಗೂಂಡಾಗಿರಿ ಪ್ರದರ್ಶಿಸಿದ ಕಾರಣಕ್ಕಾಗಿ ದೀಕ್ಷಿತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
In a viral video, some people were seen standing on roof of cars & violating traffic rules on NH-24 near Pandav Nagar to celebrate the birthday of a Youtuber (Prince). After the video went viral, Police apprehended the Youtuber: Delhi Police
(Pic 1,2: Screengrab of viral video) pic.twitter.com/AWOqJtHr79
— ANI (@ANI) March 17, 2023
ದೆಹಲಿ ಪೊಲೀಸರು ದೀಕ್ಷಿತ್‌ನನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. ಉಳಿದಂತೆ ದೀಕ್ಷಿತ್ ಸ್ನೇಹಿತರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡದಂತೆ ಯೂಟ್ಯೂಬರ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.