KARNATAKA
ಕೊಡಗು: ಆನೆ ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಸಾವು

ಕೊಡಗು, ಜೂನ್ 01: ಕಾಡಾನೆಯನ್ನು ಸೆರೆಹಿಡಿಯುವ ವೇಳೆ ಆರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಕಾಡಾನೆ ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚೆಯ್ಯಂಡಾಣೆ ಸಮೀಪದ ಮರಂದೋಡುವಿನಲ್ಲಿ ನಡೆದ ಘಟನೆ ನಡೆದಿದ್ದು ಕಾಡಾನೆ ಸಾವಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಫಿ ತೋಟದಲ್ಲಿ ಆನೆಗೆ ಅರವಳಿಕೆ ಮದ್ದು ನೀಡಿ ಕೆಲ ಹೊತ್ತಿನಲ್ಲಿ ಕಾಡಾನೆ ಸಾವನ್ನಪ್ಪಿದೆ. ಮರಂದಡು ಗ್ರಾಮದ ವಿಜಯ್‌ನಂಜಪ್ಪ ಅವರ ಕಾಫಿ ತೋಟದಲ್ಲಿ ಘಟನೆ ನಡೆದಿದ್ದು,16 ವರ್ಷದ ಹೆಣ್ಣಾನೆ ಸ್ಥಳದಲ್ಲೇ ಸಾವನ್ನಪ್ಪಿದೆ.
ದಾಂಧಲೆ ಮಾಡುತ್ತಿದ್ದ ಕಾಡಾನೆಗಳನ್ನು ಸೆರೆಹಿಡಿಯಲು ಸರ್ಕಾರದ ಅನುಮತಿ ಪಡೆದು ಕಾಡಾನೆಗಳನ್ನು ಸೆರೆ ಹಿಡಿಯಲಾಗುತ್ತದೆ ಅಂತೆಯೇ ಜಿಲ್ಲೆ ಮದೋಡ ಗ್ರಾಮದ ಕಾಫೀ ತೋಟದಲ್ಲಿ ದಾಂದಲೆ ಮಾಡುತ್ತ ಮನುಷ್ಯರ ಮೇಲೆ ದಾಳಿ ಮಾಡಿದ ಹೆಣ್ಣಾನೆಯನ್ನು ಸೆರೆಗೆ ಆರಣ್ಯ ಇಲಾಖೆ ಮುಂದಾಗಿದ್ದಾಗಿ ಆನೆಯನ್ನು ಗುರುತು ಮಾಡಿ ಅರವಳಿಕೆ ಮದ್ದು ಮೂರು ಸಾಕಾನೆಗಳ ಸಹಾಯದಿಂದ ಆನೆಯನ್ನು ಸೆರೆಹಿಡಿದು ಸಾಕಾನೆಗಳ ಸಹಾಯದಿಂದ ಎಳೆದು ಕೊಂಡು ಹೋಗುವಾಗ ಕಾಡಾನೆ ಕುಸಿದು ಬಿದ್ದಿದೆ. ಸ್ಥಳದಲಿದ್ದ ವೈದ್ಯರು ಎಷ್ಟು ಪ್ರಯತ್ನಪಟ್ಟರು ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಕಾಡಿನ ನಡುವೆ ಆನೆ ಸಾವನ್ನಪ್ಪಿದೆ. ಇದರಿಂದ ಆನೆಗೆ ಹೈಡೋಸ್ ಕೊಟ್ಟು ಆರಣ್ಯ ಇಲಾಖೆ ಸಾಯಿಸಿದೆ ಎಂದು ಸ್ಥಳೀಯರು ಮತ್ತು ಪ್ರಾಣಿ ಪ್ರಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಂಬಿಂಗ್ ನಡೆಸುತ್ತಿದ್ದರು. ಮೂರು ದಿನಗಳಿಂದ ನಡೆಯುತ್ತಿರುವ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಇತ್ತೀಚೆಗಷ್ಟೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು. ಎಂದಿನಂತೆ ಮಂಗಳವಾರ ಕೂಡಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಈ ಸಂದರ್ಭ ಸೆರೆ ಹಿಡಿಯಲು ನಿರ್ಧರಿಸಿದ್ದ ಅಂದಾಜು 16 ವರ್ಷದ ಹೆಣ್ಣಾನೆಗೆ ಅರಿವಳಿಕೆ ಚುಚ್ಚು ಮದ್ದನ್ನು ಡಾಟ್ ಮಾಡಲಾಗಿತ್ತು. ಸ್ಥಳದಿಂದ ಸ್ವಲ್ಪ ದೂರ ಓಡಿದ ಕಾಡಾನೆ ಬಳಿಕ ಅನತಿ ದೂರದಲ್ಲಿ ಬಿದ್ದಿದೆ.
ಅರಣ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆನೆಗೆ ಹಗ್ಗವನ್ನು ಬಿಗಿದು, ಅದನ್ನು ಲಾರಿಯಲ್ಲಿ ಸಾಗಿಸಲು ಪ್ರಯತ್ನಿಸಿದ್ದರು. ಈ ವೇಳೆ ಕಾಡಾನೆ ಕುಸಿದು ಬಿದ್ದು, ಮೃತಪಟ್ಟಿದೆ. ಅರಿವಳಿಕೆ ನೀಡಿದ ನಂತರ ಹೃದಯಾಘಾತದಿಂದ ಕಾಡಾನೆ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಫ್‌ಓ ಚಕ್ರಪಾಣಿ, ಪ್ರಾರಂಭದಲ್ಲಿ ಕಾಡಾನೆ ಸೆರೆಗಾಗಿ ಅರಿವಳಿಕೆ ನೀಡಲಾಗಿತ್ತು. ಆ ಬಳಿಕವೂ ಆನೆ ಓಡಾಡುತ್ತಿತ್ತು, ಆದರೆ ಅದನ್ನು ಹಿಡಿದು ತರುವ ಸಂದರ್ಭ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ. ಕಾಡಾನೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.
