ಕತ್ತಲಿನ ಕತೆ ‘ಕತ್ತಲು’ ಯಾವಾಗಲೂ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಬೆಳಗ್ಗಿನ ಜಂಜಾಟವನ್ನು ಕಳೆಯಬೇಕೆನ್ನುವ ದಾವಂತ ದಿನವೂ ಹುಟ್ಟುತ್ತಿತ್ತು. ಇತ್ತೀಚಿಗೆ ವಿಪರೀತ ಅನ್ನುವಷ್ಟರಮಟ್ಟಿಗೆ ಹೆಚ್ಚಾಗಿತ್ತು. ರಾತ್ರಿಗೆ ಕಾಯೋದು ,ಒಮ್ಮೆ ನಿಡಿದಾಗಿ ಉಸಿರು ಬಿಟ್ಟು ಅದನ್ನು ಆಸ್ವಾದಿಸುತ್ತಾ ಬೆಳಗಿನ ಬೆಳಕಿಗೆ...
ತಪ್ಪಲ್ಲವೇ? ಅಲ್ಲಿ ಮೇಲೆ ನಿಂತ ಚೈತನ್ಯ ಶಕ್ತಿ ಎನಂದುಕೊಳ್ಳುತ್ತಿದ್ದೀಯೋ ಗೊತ್ತಿಲ್ಲ. ಖಂಡಿತ ನೋವಾಗಿರುತ್ತೆ. ತಲೆಮೇಲೆ ಹೊತ್ತು ಮೆರೆಸಿದರು ಅರಿವಿನಿಂದಲೋ ಅಥವಾ ಗೊತ್ತಿಲ್ಲದೆಯೋ ಕಾಲಕಸ ಮಾಡಿರುವುದು ನೋವು ತರಿಸಿರುವುದು ಖಂಡಿತ .ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನಾ ಬರುವ...
ಚಲನೆ “ಚಲನೆ ಇದ್ದರೆ ಮಾತ್ರ ಅಲ್ಲವೇ ಬದುಕು ಮತ್ತು ಅಭಿವೃದ್ಧಿ ಸಾಧ್ಯ. ಯಾವುದಾದರೂ ಆಗಬಹುದು ಸ್ಥಿರವಾಗಿದ್ದರೆ ಗತಿಸುತ್ತದೆ”. “ಇಲ್ಲ ನಾನಿದನ್ನು ಒಪ್ಪುವುದಿಲ್ಲ, ಮರ ನಿಂತಿರುವುದಿಲ್ಲವಾ? ಮನೆ ,ದೊಡ್ಡ ಕಂಬ, ದೇವಸ್ಥಾನ ,ಶಿಲಾಶಾಸನ ,ಅಣೆಕಟ್ಟು,ಇವೆಲ್ಲವೂ ನಿಂತಿರುವುದಲ್ಲವಾ?”. ”...
ನಂಬೋದ್ಯಾರನ್ನಾ ಇಲ್ಲಿ ತಪ್ಪು ಯಾರದ್ದು ಅನ್ನೋದು ಗೊತ್ತಿಲ್ಲ .ನನ್ನೊಳಗಿನ ‘ನಾನು’ ಅನ್ನುವವನು ಎಲ್ಲರನ್ನು ಒಂದೇ ತೆರದಿ ನೋಡುತ್ತಿದ್ದ. ಹಾಗೆ ವರ್ತಿಸುತ್ತಿದ್ದ. ಮನೆಯ ಜಗಲಿಯಲ್ಲಿ ದಿನವೂ ಮಲಗುವ ಜಿಮ್ಮಿಯನ್ನು, ಅಂಗಳದ ಹೂಗಿಡಗಳನ್ನು ,ಮಾರ್ಗ ಬದಿಯ ಮರವನ್ನು, ಹಂಚಿನ...
ಅಜ್ಜಿ ಬಿಸಿಲಿನ ಝಳವನ್ನು ತಡಿಯೋಕ್ಕಾಗದೆ ಸೂರ್ಯ ಮೋಡವನ್ನು ಕರೆದು ಮರೆಮಾಡಿ ನೆರಳಿಗೆ ಬಂದು ನಿಂತ. ಅದಕ್ಕೆ ಕಾಯುತ್ತಿದ್ದರೋ ಅಥವಾ ಸಮಯವಾಯಿತೋ ಗೊತ್ತಿಲ್ಲ ಕತ್ತಿಹಿಡಿದು ಹುಲ್ಲು ತರೋಕೆ ತೋಟದ ಕಡೆಗೆ ನಡೆದರು ನನ್ನ ಲಕ್ಷ್ಮಿ ಅಜ್ಜಿ. ಅವರ...
ಕತೆಯಾದವ ಅವನೇನು ನನಗೆ ಅತಿ ಅಪರಿಚಿತನಲ್ಲ .ಎಲ್ಲೋ ನೋಡಿದ ಹಾಗೆ ಕಾಣಿಸುವ ಮುಖ ಅವನದ್ದು. ನಾ ಕತೆ ಬರೆಯಲು ಆರಂಭಿಸಿದ ದಿನದಂದು ಅದನ್ನು ಓದುತ್ತಿದ್ದನಂತೆ. ಹಾಗಾಗಿ ಸಿಕ್ಕಿದಾಗಲೆಲ್ಲಾ, ವೈಯಕ್ತಿಕ ಭೇಟಿಯಲ್ಲಿ, ಆಥವಾ ಸಂದೇಶದಲ್ಲಿ “ನಂದೂ ಒಂದು...
“ಮಾನವ?” ನಮ್ಮೂರಿನ ಗುಡ್ಡದಿಂದ ಇಳಿದು ಬರುವ ಸಣ್ಣ ತೊರೆಯು ಗದ್ದೆ ತೋಟಗಳನ್ನು ಹಾದು, ರೋಡು ಬೆಟ್ಟವನ್ನು ಹತ್ತಿ ಇಳಿದು, ಧುಮುಕಿ, ನದಿಯಾಗಿ ಸಾಗರವನ್ನು ಸೇರುತ್ತದೆ. ನಮ್ಮೂರಿನ ಗುಡ್ಡದಲ್ಲಿ ಹುಟ್ಟುವ ನೀರನ್ನ ಮಾತನಾಡಿಸುವ ಆಸೆಯಿಂದ ಸಮುದ್ರದ ಬಳಿ...
ದಡ ಚಕ್ರಗಳ ವೇಗದ ತಿರುವಿಕೆ ಗೆ ಧೂಳಿನ ಕಣಗಳು ಮೇಲೆದ್ದು ನಿಂತು ಕೂರಲು ಜಾಗವನ್ನು ಹುಡುಕುವಾಗಲೇ ಕಂಡದ್ದು ಅಜ್ಜನ ಚಹಾ ಅಂಗಡಿ. ಅದೇನು ಭದ್ರವಾಗಿ ನಿಲ್ಲುವ ಗೋಡೆಯನ್ನು ಹೊಂದಿಲ್ಲ ಆದರೆ ಬಾಂಧವ್ಯವಿದೆ ಬಿಗಿಯಾಗಿ.ಹಾಗಾಗಿ ಜನ ಬರುತ್ತಾರೆ....
ಅವರು ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್ ಶಬ್ದ ,ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು ?. ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ...
ಆಲೋಚನೆ ಶರದಿಯಲ್ಲಿ ಕ್ಷಣಕ್ಷಣಕ್ಕೂ ಮೊಳಕೆಯೊಡೆದು ಬೃಹದಾಕಾರವಾಗಿ ಬೆಳೆದು ದಡವನ್ನು ತಬ್ಬಿ ಮರಳುವ ಅಲೆ ಕೂಡ ಇಷ್ಟು ಯೋಚನೆ ಮಾಡಿರಲಿಕ್ಕಿಲ್ಲವೇನೋ?. ನನ್ನಮ್ಮ ಪರಿಶ್ರಮ, ದುಡಿಮೆಗಾಗಿ, ಹುಟ್ಟಿದವಳು ಅಂತನಿಸುತ್ತದೆ .ಇವಳ ಹುಟ್ಟಿನಿಂದ ಮನೆಯಲ್ಲಿ ಕೆಲಸಕ್ಕೆ ಕೆಲಸದವಳು ಸಿಕ್ಕಿರಬಹುದು. ಅವಳಿಗೆ...