Connect with us

    LATEST NEWS

    ದಿನಕ್ಕೊಂದು ಕಥೆ- ಚಲನೆ

    ಚಲನೆ

    “ಚಲನೆ ಇದ್ದರೆ ಮಾತ್ರ ಅಲ್ಲವೇ ಬದುಕು ಮತ್ತು ಅಭಿವೃದ್ಧಿ ಸಾಧ್ಯ. ಯಾವುದಾದರೂ ಆಗಬಹುದು ಸ್ಥಿರವಾಗಿದ್ದರೆ ಗತಿಸುತ್ತದೆ”. “ಇಲ್ಲ ನಾನಿದನ್ನು ಒಪ್ಪುವುದಿಲ್ಲ, ಮರ ನಿಂತಿರುವುದಿಲ್ಲವಾ? ಮನೆ ,ದೊಡ್ಡ ಕಂಬ, ದೇವಸ್ಥಾನ ,ಶಿಲಾಶಾಸನ ,ಅಣೆಕಟ್ಟು,ಇವೆಲ್ಲವೂ ನಿಂತಿರುವುದಲ್ಲವಾ?”.

    ” ಆಯ್ತು ಇಲ್ಲಿ ಕೇಳು, ಮರ ನಿಂತಿದ್ದರೂ ಅದು ಇಂಗಾಲವನ್ನು ಪಡೆದು ಆಮ್ಲಜನಕವನ್ನು ನೀಡುತ್ತದೆ, ಅದು ಪಡೆದ ಇಂಗಾಲ ಚಲನೆಯಲ್ಲಿ ಇದ್ದದ್ದು ಮತ್ತು ಆಮ್ಲಜನಕ ಎಲ್ಲಾ ಕಡೆಗೆ ಚಲಿಸುತ್ತದೆ. ಮನೆಯೊಂದು ನಿಲ್ಲಬೇಕಾದರೆ ಅದನ್ನು ಕಟ್ಟುವ ವಸ್ತುಗಳು ಬೇರೆ ಕಡೆಯಿಂದ ಚಲಿಸಿಯೇ ಬರಬೇಕು‌.ಅದರೊಳಗೆ ಬದುಕುವವರು ಚಲಿಸಿದರೆ ಮಾತ್ರ ಮನೆ ಜೀವಂತವಾಗಿರುತ್ತದೆ ಮತ್ತೆ ದೇವಾಲಯ ,ಚರ್ಚು ,ಮಸೀದಿ ಅದರೊಳಗಿನ ಒಳಗಿನ ದೇವರುಗಳು ಸ್ಥಿರವಾಗಿದ್ದರೂ ಅದರ ಪ್ರಭಾವಲಯ, ಪ್ರಸಿದ್ಧಿ, ಕೀರ್ತಿ, ಭಕ್ತಿಗಳು ಚಲಿಸುತ್ತವೆ. ಈಗೇನು ಹೇಳ್ತಿಯಾ?”

    “ಇಲ್ಲ ನನಗೆ ಸೋಲೋಕೆ ಮನಸ್ಸಿಲ್ಲ. ನಾನು ಒಂದಷ್ಟು ಜನರ ಅಭಿಪ್ರಾಯ ತಗೊಂಡು ನಿನ್ನೆದುರಿಗೆ ವಾದ ಮಾಡುತ್ತೇನೆ.. ನಮಸ್ತೆ ಹಾ ನಿಮಗೇನೆ, ಇದನ್ನ ಓದುತ್ತಾ ಇದ್ದೀರಲ್ಲಾ ನಿಮಗೆ.ನನಗೊಂದು ಸಹಾಯ ಮಾಡ್ತೀರಾ, ಇವನು ಮಾತು ಕೇಳಿದಿರಿ ಅಲ್ವಾ !. ಚಲನೆ ಇದ್ದರೆ ಮಾತ್ರ ಬದುಕು ಮತ್ತು ಅಭಿವೃದ್ಧಿ ಅನ್ನುತ್ತಿದ್ದಾನೆ. ಇದನ್ನು ಸುಳ್ಳು ಅಂತ ಸಾಧಿಸೋಕೆ ಸಹಾಯಮಾಡಿ”.

    ” ನೀನು ಅವರ ಬಳಿ ಸಹಾಯ ಕೇಳ್ತಿದ್ದಿಯಾ!. ನೋಡಯ್ಯ, ಚಲನೆ ಇದ್ದದಕ್ಕೆ ಇಷ್ಟೊಂದು ಬಸ್ಸು ಗಾಡಿಗಳು ಓಡಾಡುವುದು. ನಿಂತಲ್ಲಿ ನಿಂತರೆ ಕಾಲು ನೋವಾಗುವುದು ಬಿಟ್ಟರೆ ಬೇರೆ ಏನಿಲ್ಲ.ಸುಮ್ಮನೆ ನಡಿತಾ ಇರಬೇಕು. ಕಾಲಾನೇ ನಡೆಯುತ್ತೆ ಮತ್ತೆ ನಿಂದೇನು?”. “ಸರ್ ಅಥವಾ ಮೇಡಂ ಇದಕ್ಕೀಗ ನೀವೇನು ಹೇಳ್ತೀರಾ ?ನಿಮ್ಮನ್ನೇ ನಂಬಿದ್ದೇನೆ ಮಾತು ಮುಂದುವರಿಸೋಕೆ ಸಹಾಯ ಮಾಡ್ತೀರಾ ಅಲ್ವಾ

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply