Connect with us

    LATEST NEWS

    ದಿನಕ್ಕೊಂದು ಕಥೆ- ಕತ್ತಲಿನ ಕತೆ

    ಕತ್ತಲಿನ ಕತೆ

    ‘ಕತ್ತಲು’ ಯಾವಾಗಲೂ ರಾತ್ರಿಯಾಗುವುದನ್ನೇ ಕಾಯುತ್ತಿತ್ತು. ಬೆಳಗ್ಗಿನ ಜಂಜಾಟವನ್ನು ಕಳೆಯಬೇಕೆನ್ನುವ ದಾವಂತ ದಿನವೂ ಹುಟ್ಟುತ್ತಿತ್ತು. ಇತ್ತೀಚಿಗೆ ವಿಪರೀತ ಅನ್ನುವಷ್ಟರಮಟ್ಟಿಗೆ ಹೆಚ್ಚಾಗಿತ್ತು. ರಾತ್ರಿಗೆ ಕಾಯೋದು ,ಒಮ್ಮೆ ನಿಡಿದಾಗಿ ಉಸಿರು ಬಿಟ್ಟು ಅದನ್ನು ಆಸ್ವಾದಿಸುತ್ತಾ ಬೆಳಗಿನ ಬೆಳಕಿಗೆ ಬೇಸರದಿ ಒಗ್ಗಿಕೊಳ್ಳುವುದು ಅಭ್ಯಾಸವಾಗಿ ಹೋಗಿತ್ತು.

    ಅದಕ್ಕೆ ಈ ಅಭ್ಯಾಸ ಉಂಟಾಗಿದ್ದು ತುಂಬಾ ಸಮಯದ ಹಿಂದಿನಿಂದಲಲ್ಲ ಇತ್ತೀಚಿನಿಂದ. ಕತ್ತಲು ಹಲವನ್ನು ಮುಚ್ಚಿಡುತ್ತದೆ. ಕಣ್ಣೀರು ,ನೋವಿನ ಕೂಗು, ಮಾನ ಮರ್ಯಾದೆ ಎಲ್ಲವನ್ನೂ. ಕೆಲವು ಅವಗಡಗಳು ಘಟಿಸುವಾಗ ನೋವಾದರೂ, ಸಾಂತ್ವನ ಬಯಸುವ ಮನಸ್ಸುಗಳು ಪಿಸುಗುಟ್ಟುವುದು ಈ ರಾತ್ರಿಯಲ್ಲಿ .ಹಾಗಾಗಿ ಅದಕ್ಕೆ ಬೆಳಗ್ಗೆ ಎಂದರೆ ವಾಕರಿಕೆ .ಅಲ್ಲಿ ಮುಖವಾಡಗಳು ಹೆಚ್ಚಾಗುತ್ತವೆ.

    ಕತ್ತಲೆಯನ್ನ ಬೆಳಕು ಓಡಿಸಲು ಪ್ರಾರಂಭಿಸಿದಾಗಲೇ ಹಲವು ಮುಖಗಳು ಹೊರಬಂದು ವೈಯಕ್ತಿಕವೂ ಗುಂಪೋ ಒಟ್ಟಿನಲ್ಲಿ ನೋವನ್ನು ನೀಡಿ ಹೊರಟು ಹೋಗುತ್ತಿತ್ತು .ಆ ನೋವನ್ನು ಅನುಭವಿಸಿದವರು ಕತ್ತಲನ್ನು ಅರಸುತ್ತಿದ್ದಾರೆ ಕತ್ತಲು ರಾತ್ರಿಯನ್ನರಸುವಂತೆ.

    ತಪ್ಪು ಕೆಲಸಗಳ ಆದಾಗ ಕತ್ತಲು ತಾನೂ ಬೆಳಕು ಆಗಿರಬೇಕೆಂದು ಬಯಸಿದರು, ಕಣ್ಣೀರು ತಲೆದಿಂಬುಗಳನ್ನು ತೋಯಿಸುವಾಗ, ನೋವಿನ ನುಡಿಗಳು ಪಿಸುಗುಟ್ಟುವಾಗ ,ನಾ ಹೀಗೆ ಇರಲಿ ಎಂದು ಬಯಸುತ್ತದೆ. ಅದಕ್ಕೆ ಇದೊಂದು ಪರಿಸ್ಥಿತಿ ತುಂಬಾ ಬಿಗಡಾಯಿಸಲು ಆರಂಭಿಸಿದೆ .ಅದರ ಕೂಗನ್ನು ಚೈತನ್ಯರೂಪಿ ಕೇಳದಿದ್ದರೆ ಸಾಕು ತಥಾಸ್ತು ಅಂದುಬಿಟ್ಟರೆ ಬೆಳಕು ಹುಟ್ಟಿ ಕತ್ತಲು ಬರದೇ ಇದ್ದುಬಿಟ್ಟರೆ?. ನೋವಿನ ನುಡಿಗಳಿಗೆ ಕಣ್ಣೀರಿನ ಹನಿಗಳಿಗೆ ಹೊರಬರಲು ಸಮಯವಕಾಶವೇ ಸಿಗದಿರುವ ಪರಿಸ್ಥಿತಿ ಉಂಟಾಗಬಹುದು .

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply