Connect with us

FILM

ಸುಶಾಂತ್ ಸಾವು ; ಲವರ್ ರಿಯಾ ಮೇಲೂ ಕೇಸು ದಾಖಲು

ಮುಂಬೈ, ಜೂನ್ 21 : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಈಗ ಆತನ ಲವರ್ ಆಗಿದ್ದ ರಿಯಾ ಚಕ್ರಬರ್ತಿ ಮೇಲೂ ಕೇಸು ದಾಖಲಾಗಿದೆ. ಬಿಹಾರದ ಮುಜಾಫರ್ ಪುರದ ಚೀಫ್ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಕುಂದನ್ ಕುಮಾರ್ ಎಂಬವರು ಖಾಸಗಿ ದೂರು ದಾಖಲಿಸಿದ್ದು ಜೂನ್ 24ರಂದು ವಿಚಾರಣೆಗೆ ಬರಲಿದೆ.

ರಿಯಾ, ಸುಶಾಂತ್ ಮೇಲೆ ಮಾನಸಿಕವಾಗಿ ಮತ್ತು ಹಣಕಾಸು ವಿಚಾರದಲ್ಲಿ ಹಿಂಸೆ ನೀಡಿದ್ದಾಳೆ. ಹೀಗಾಗಿ ಐಪಿಸಿ ಸೆಕ್ಷನ್ 306 ಮತ್ತು 420 ಅಡಿ ಕೇಸು ದಾಖಲಿಸಿದ್ದಾಗಿ ಕುಮಾರ್ ಲಾಯರ್ ಕಮಲೇಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಮುಂಬೈ ಪೊಲೀಸರು ಈಗಾಗಲೇ ರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಮುಜಾಫರ್ ಪುರ ಕೋರ್ಟಿನಲ್ಲಿ ದಾಖಲಾದ ಎರಡನೇ ಖಾಸಗಿ ದೂರು ಇದಾಗಿದ್ದು ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಝಾ ಎಂಬವರು ಇತ್ತೀಚೆಗೆ ಬಾಲಿವುಡ್ ಖ್ಯಾತನಾಮರಾದ ಸಲ್ಮಾನ್ ಖಾನ್, ಆದಿತ್ಯಾ ಚೋಪ್ರಾ, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ ಮತ್ತು ಏಕ್ತಾ ಕಪೂರ್ ಅವರನ್ನು ಆರೋಪಿಗಳಾಗಿಸಿ ಪ್ರಕರಣ ದಾಖಲಿಸಿದ್ದರು.

ಸುಶಾಂತ್ ಸಿಂಗ್ ಕೆರಿಯರ್ ಮೇಲೆ ಪ್ರಭಾವ ಬೀರಿದ್ದ ಈ ಖ್ಯಾತನಾಮರು, ಸುಶಾಂತ್ ನಟಿಸಿದ್ದ ಚಿತ್ರಗಳು ತೆರೆಗೆ ಬರದಂತೆ ಅಡ್ಡಗಾಲು ಹಾಕಿದ್ದರು‌. ಇದರಿಂದ ಸುಶಾಂತ್ ಮಾನಸಿಕ ಹಿಂಸೆ ಅನುಭವಿಸಿದ್ದರು ಎಂದು ಹೇಳಿದ್ದರು. ರಿಯಾ ಜೊತೆಗೆ ಗಾಢ ಸಂಬಂಧ ಇಟ್ಟುಕೊಂಡಿದ್ದ ಸುಶಾಂತ್, ಆಬಳಿಕ ಯಾವುದೋ ಕಾರಣಕ್ಕೆ ಬೇರೆಯಾಗಿದ್ದರು. ಈ ವಿಚಾರವೂ ಸುಶಾಂತ್ ಅವರನ್ನು ಆತ್ಮಹತ್ಯೆಗೆ ಪ್ರೇರೇಪಿಸಿತ್ತು ಎನ್ನುವ ಆರೋಪ ಕೇಳಿಬಂದಿತ್ತು.

Facebook Comments

comments