FILM
ಕಿಚ್ಚ ಸುದೀಪ್ ಮನೆ ಪಕ್ಕದಲ್ಲೇ ಕೊರೊನಾ ಸೋಂಕು ಪತ್ತೆ , ಅಭಿಮಾನಿಗಳಲ್ಲಿ ಆತಂಕ
ಬೆಂಗಳೂರು, ಜೂನ್ 23 : ಲಾಕ್ ಡೌನ್ ಘೋಷಣೆ ಆಗಿರುವಂತೆಯೇ ಬೆಂಗಳೂರಿನಲ್ಲಿ ಹೊಸ ಹೊಸ ಸೋಂಕು ಕಾಣಿಸಿಕೊಳ್ಳುತ್ತಿದೆ. ಖ್ಯಾತ ಬಹುಭಾಷಾ ನಟ ಕಿಚ್ಚ ಸುದೀಪ್ ಮನೆ ಪಕ್ಕದಲ್ಲೇ ಈಗ ಕೊರೋನಾ ಸೋಂಕು ಕಾಣಿಸಿದ್ದು ಚಿತ್ರ ತಾರೆಯರಲ್ಲೂ ಆತಂಕ ಎದುರಾಗಿದೆ.
ಚಾಮರಾಜ ಪೇಟೆಯ ಚಿಕ್ಕಪೇಟೆಯಲ್ಲಿ ಅಂಗಡಿ ಹೊಂದಿರುವ ವ್ಯಾಪಾರಿಯೊಬ್ಬರು, ಸುದೀಪ್ ಮನೆಯ ಪಕ್ಕದಲ್ಲಿ ವಾಸವಾಗಿದ್ದಾರೆ. ಆ ವ್ಯಕ್ತಿಯ ಕುಟುಂಬದಲ್ಲಿ 23 ಜನರಿದ್ದು ಆ ಪೈಕಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈಗಾಗ್ಲೇ ಚಿಕ್ಕಪೇಟೆ ಸೀಲ್ ಡೌನ್ ಆಗಿದ್ದು ಅಲ್ಲಿ ಮತ್ತಷ್ಟು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ. ಸದ್ಯಕ್ಕೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಪ್ರದೇಶದಲ್ಲಿ ಸ್ಯಾನಿಟೈಸರ್ ಅಳವಡಿಸುತ್ತಿದ್ದಾರೆ. ಪಕ್ಕದ ಮನೆಗೆ ಬಂದ ಸೋಂಕು, ನಮ್ಮ ಅಣ್ಣನ ಮನೆಗೆ ಬಾರದಿರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
You must be logged in to post a comment Login