Connect with us

FILM

ರಕ್ಷಣೆಯ ಮೊದಲ ಹೆಜ್ಜೆ- ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಟ್ವಿಟರ್‌ನಿಂದ ಔಟ್

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ನಡೆಯತ್ತಿರುವ ವಾರ್ ಗೆ ದಬಾಂಗ್ ಸುಂದರಿ ಸೋನಾಕ್ಷಿ ಸಿನ್ಹಾ ರಕ್ಷಣಾತ್ಮಕ ಆಟದ ಮೊರೆ ಹೋಗಿದ್ದು, ಇದರ ಮೊದಲ ಹೆಜ್ಜೆಯಾಗಿ ಟ್ವಿಟರ್ ನಿಂದ ಹೊರ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಸೋನಾಕ್ಷಿ ಸಿನ್ಹಾ ಇಸ್‍ಸ್ಟಾಗ್ರಾಮ್‍ನಿಂದ ಟ್ವಿಟ್ಟರ್‌ವರೆಗೆ ಪ್ರತಿ ಪ್ಲಾಟ್ಫಾರ್ಮ್ ನಲ್ಲೂ ತಮ್ಮ ಅಭಿಪ್ರಾಯಗಳೊಂದಿಗೆ ಫೋಟೋ, ವಿಡಿಯೋ ಹಾಗೂ ವಿಚಾರಗಳನ್ನು ಹಂಚಿಕೊಳುತ್ತಿದ್ದರು.


33 ವರ್ಷದ ನಟಿ ಸೋನಾಕ್ಷಿ ಸಿನ್ಹಾ ಶನಿವಾರ ಸಂಜೆ ಟ್ವಿಟ್ಟರ್ ನಿಂದ ನಿರ್ಗಮಿಸುವುದಾಗಿ ಘೋಷಿಸಿದ್ದರು. ಜೊತೆಗೆ “ನಿಮ್ಮ ವಿವೇಕವನ್ನು ಕಾಪಾಡುವ ಮೊದಲ ಹೆಜ್ಜೆ ನಕಾರಾತ್ಮಕತೆಯಿಂದ ದೂರವಿರುವುದು. ಈ ದಿನಗಳಲ್ಲಿ ಅದಕ್ಕಿಂತ ಹೆಚ್ಚಿನದ್ದೇನೂ ಇಲ್ಲ. ಟ್ವಿಟರ್ ಚಲೋ, ನಾನು ಆಫ್ ಆಗಿದ್ದೇನೆ. ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತಿದ್ದೇನೆ. ಹುಡುಗರೇ, ಪೀಸ್ ಔಟ್” ಎಂದು ಬರೆದಿದ್ದರು. ಇದಾದ ಬಳಿಕ ಕೆಲವೇ ಕ್ಷಣಗಳಲ್ಲಿ ತಮ್ಮ ಖಾತೆಯನ್ನು ನಿಷ್ಕ್ರೀಯಗೊಳಿಸಿದ್ದಾರೆ. ಜೊತೆಗೆ ಅದರ ಸ್ಕ್ರೀನ್‍ಶಾಟ್ ತೆಗೆದು “ಬೆಂಕಿಯಲ್ಲಿ, ನಾವು ನಮ್ಮ ವಿನೋದದಲ್ಲಿ. ಬಾಯ್ ಬಾಯ್ ಟ್ವಿಟ್ಟರ್” ಎಂದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.


ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ನೆಟ್ಟಿಗರು ಅನೇಕ ಸ್ಟಾರ್ ನಟ, ನಟಿಯರು ಹಾಗೂ ನಿರ್ದೇಶಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಹಾಗೆ ನಟಿ ಸೋನಾಕ್ಷಿ ಸಿನ್ಹಾ ಅವರನ್ನು ನಟ್ಟಿಗರು ಹೆಚ್ಚಾಗಿ ಟ್ರೋಲ್ ಮಾಡುತ್ತಿದ್ದಾರೆ.

 

Facebook Comments

comments