Connect with us

FILM

ಸುಶಾಂತ್ ಸಿಂಗ್ ಅಕ್ಕ ಬರೆದ ಭಾವನಾತ್ಮಕ ಪತ್ರ…..ಓ ನನ್ನ ಕಂದ, ಬಂಗಾರವೇ ಕ್ಷಮಿಸು ಬಿಡು….!!

ಮುಂಬೈ : ಇತ್ತೀಚೆಗೆ ಸಾವು ಕಂಡ ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು ನೆನೆದು ಸೋದರಿ ಶ್ವೇತಾ ಸಿಂಗ್‌ ಅವರು ಫೇಸ್‌ಬುಕ್‌ನಲ್ಲಿ ಭಾವುಕ ಪೋಸ್ಟ್‌ ಹಾಕಿದ್ದರೆ. ಅವರು ಬರೆದಿರುವ ಬಾವುಕ ಪೋಸ್ಟ್ ಕಣ್ಣೀರು ತರಿಸುವಂತೆ ಇದೆ. ಆ ಮನ ಕಲಕುವ ಪೋಸ್ಟ್ ನಲ್ಲಿರುವ ಸಾಲುಗಳು….


ಸುಶಾಂತ್‌ ನಮ್ಮೊಂದಿಗೆ ದೈಹಿಕವಾಗಿ ಇಲ್ಲ. ಸರಿ, ನೀನು (ಸುಶಾಂತ್‌) ನೋವಿನಲ್ಲಿದ್ದೆ ಎಂಬುದು ನನಗೆ ಗೊತ್ತಿದೆ. ನೀನು ಹೋರಾಟಗಾರ ಎಂಬುದೂ ತಿಳಿದಿದೆ. ನೀನು ಧೈರ್ಯದಿಂದ ಹೋರಾಡಿದೆ. ಕ್ಷಮಿಸು, ನೀನು ಅನುಭವಿಸಿದ ನಿನ್ನೆಲ್ಲ ನೋವುಗಳಿಗಾಗಿ ನಮ್ಮನ್ನು ಕ್ಷಮಿಸು. ಸಾಧ್ಯವಾಗಿದ್ದರೆ ನಾನು ನಿನ್ನೆಲ್ಲ ನೋವುಗಳನ್ನು ಪಡೆದು, ನನ್ನೆಲ್ಲ ಸಂತೋಷವನ್ನು ನಿನಗೆ ನೀಡುತ್ತಿದ್ದೆ. ನಿನ್ನ ಮಿನುಗುವ ಕಣ್ಣುಗಳು ಕನಸನ್ನು ಹೇಗೆ ಕಾಣಬೇಕೆಂಬುದನ್ನು ಜಗತ್ತಿಗೆ ಕಲಿಸಿದವು. ನಿನ್ನ ಮುಗ್ಧ ನಗುವು ನಿನ್ನ ಹೃದಯದ ನಿಷ್ಕಲ್ಮಷವನ್ನು ಬಹಿರಂಗಪಡಿಸಿತ್ತು. ನೀನ್ನನ್ನು ನಾವು ಎಂದಿಗೂ ಪ್ರೀತಿಸುತ್ತೇವೆ. ಹೆಚ್ಚು ಪ್ರೀತಿಸುತ್ತೇವೆ. ನೀನು ಎಲ್ಲೇ ಇರು ಸಂತೋಷವಾಗಿರು. ಸಂತೃಪ್ತನಾಗಿರು. ನಿನ್ನನ್ನು ಎಲ್ಲರೂ ಪ್ರೀತಿಸುತ್ತಾರೆ, ನಿಸ್ಸಂಶಯವಾಗಿ ಎಲ್ಲರೂ ಇಷ್ಟಪಡುತ್ತಾರೆ.


ನನ್ನೆಲ್ಲ ಪ್ರೀತಿ ಪಾತ್ರರೇ, ಇದು ಕ್ಲಿಷ್ಟಮಯ ಸನ್ನಿವೇಶ. ಆದರೆ ದ್ವೇಷದ ವಿರುದ್ಧ ನೀವು ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳಿ. ಕೋಪ ಮತ್ತು ಅಸಮಾಧಾನಕ್ಕಿಂತ ದಯೆ ಮತ್ತು ಸಹಾನುಭೂತಿಯನ್ನು ಆರಿಸಿಕೊಳ್ಳಿ, ಸ್ವಾರ್ಥಕ್ಕಿಂತ ಹೆಚ್ಚಾಗಿ ನಿಸ್ವಾರ್ಥತೆಯನ್ನು ಆರಿಸಿಕೊಳ್ಳಿ ಮತ್ತು ಜನರನ್ನು ಕ್ಷಮಿಸಿ ಪ್ರತಿಯೊಬ್ಬರೂ ತಮ್ಮದೇ ಹೋರಾಟಗಳಲ್ಲಿ ನಿರತರಾಗಿದ್ದಾರೆ. ಆದರೆ, ನಿಮ್ಮ ಬಗ್ಗೆ ನೀವೇ ಸಹಾನುಭೂತಿ ಹೊಂದಿರಬೇಕು. ಮತ್ತು, ಎಲ್ಲರಿಗೂ ಸಹಾನುಭೂತಿ ತೋರಿಸಿ. ಯಾವುದೇ ಹಂತದಲ್ಲೂ, ಯಾವುದೇ ಕಾರಣಕ್ಕೂ ನಿಮ್ಮ ಹೃದಯವನ್ನು ನಿರ್ಬಂಧಕ್ಕೆ ಒಡ್ಡಿಕೊಳ್ಳಬೇಡಿ…


ನನ್ನ ಪ್ರೀತಿ ಪಾತ್ರವಾದ ವ್ಯಕ್ತಿಗಳಲ್ಲಿ ನೀನು ಮೊದಲಿಗ. ಇದು ಕಷ್ಟದ ಸಮಯ ಎಂದು ನನಗೆ ಗೊತ್ತು. ದ್ವೇಷದ ಜಾಗದಲ್ಲಿ ಪ್ರೀತಿ, ಕೋಪದ ಬದಲಾಗಿ ದಯೆ ಮತ್ತೆ ಕರುಣೆಯನ್ನ ಆಯ್ಕೆ ಮಾಡಿಕೊಳ್ಳೋಣ ಎಂದು ಬರೆದು ತನಗಾಗಿ ತಮ್ಮ ಬರೆದಿದ್ದ ಹಳೆಯ ಪತ್ರವನ್ನು ಶೇರ್ ಮಾಡಿಕೊಂಡಿದ್ದಾರೆ. ಅವಳು ಹೇಳುವುದನ್ನ ಖಂಡಿತಾ ಮಾಡುತ್ತಾಳೆ ಮತ್ತು ಅವಳು ಹೇಳುವುದನ್ನು ಖಂಡಿತ ಮಾಡಲ್ಲ. ಒಟ್ಟಿನಲ್ಲಿ ಎರಡೂ ಸಾಲುಗಳು ಒಂದೇ. ಈ ರೀತಿಯ ಮಹಿಳೆಯರಲ್ಲಿ ನೀನೇ ನಂಬರ್ ಒನ್. ಲವ್ ಯು, ನಿನ್ನ ತಮ್ಮ ಸುಶಾಂತ್.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *