Connect with us

    FILM

    ನೀಲಿ ತಾರೆ ಸನ್ನಿ ಲಿಯೋನ್ ಹಿಂದೂ ದೇವತೆ : ನಿರ್ದೇಶಕರಿಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

     

    ನೀಲಿ ತಾರೆ ಸನ್ನಿ ಲಿಯೋನ್ ಹಿಂದೂ ದೇವತೆ : ನಿರ್ದೇಶಕರಿಗೆ ಎಚ್ಚರಿಕೆ ನೀಡಿದ ಬಿಜೆಪಿ ಮುಖಂಡ

    ನವದೆಹಲಿ. ಡಿಸೆಂಬರ್ 06 : ಪದ್ಮಾವತಿ ಸಿನಿಮಾ ಬಿಡುಗಡೆ ಯಾಗಲು ಹಲವು ಅಡ್ಡಿ ಆತಂಕಗಳು ಎದುರಾಗುತ್ತಲೇ ಇರುವಾಗ ಇದೀಗ ಮತ್ತೊಂದು ಹಿಂದಿ ಚಿತ್ರ ನಿರ್ದೇಶಕರು ವಿವಾದ ಸೃಷ್ಟಿಸಲು ಮುಂದಾಗಿದ್ದಾರೆ.

    ಈ ಚಲನ ಚಿತ್ರದಲ್ಲಿ ನೀಲಿ ಚಿತ್ರಗಳ ತಾರೆ ಮಣಿ ಸನ್ನಿ ಲಿಯಾನ್ ಅವರನ್ನು ಹಿಂದೂ ದೇವತೆಯ ರೂಪದಲ್ಲಿ ತರಲು ಸಿದ್ದತೆಗಳನ್ನು ಆ ನಿರ್ದೇಶಕ ಮಾಡಿದ್ದಾರೆ.

    ಇದು ಇದೀಗ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

    ಭಾರತೀಯ ಸಿನಿಮಾಗಳಲ್ಲಿ ಹಿಂದೂ ದೇವತೆಯ ಪಾತ್ರದಲ್ಲಿ ತೋರಿಸದಂತೆ ಈಗಾಗಲೇ ಪದ್ಮಾವತಿ ಸಿನಿಮಾ ಕುರಿಯ ವಿವಾದದಾಸ್ಪದ ಹೆಳಿಕೆ ನೀಡಿರುವ ಹರಿಯಾಣದ ಬಿಜೆಪಿ ಮುಖಂಡ ಸುರಲ್ ಅಮು ಈ ಬಗ್ಗೆ ನಿರ್ದೇಶಕರಿಗೆ ಎಚ್ಚರಿಕೆ ನೀಡಿದ್ದಾರೆ.

    ಮೂಲತಾ ಸನ್ನಿಲಿಯಾನ್ ಪಂಜಾಬಿನ ಹೆಣ್ಣುಮಗಳು. ಆದರೂ ನೆಲೆಸಿದ್ದು ವಿದೇಶದಲ್ಲಿ. ಮಾಡಿದ್ದು ನೀಲಿ ಚಿತ್ರಗಳನ್ನು.

    ಆಕೆಯನ್ನು ಭಾರತದ ಸಿನಿಮಾಗಳಲ್ಲಿ ಹಿಂದೂ ದೇವತೆಯಾಗಿ ಬಿಂಬಿಸುವುದನ್ನು ನಾವು ಸಹಿಸುವುದು ಸಾಧ್ಯವೇ’ ಎಂದು ಅವರು ತೀಕ್ಷವಾಗಿ ಪ್ರಶ್ನಿಸಿದ್ದಾರೆ.

    ಇದೇ ಬಿಜೆಪಿ ಮುಖಂಡ ಸುರಲ್ ಅಮು ‘ಪದ್ಮಾವತಿ’ ಚಿತ್ರದ ನಟಿ ದೀಪಿಕಾ ಪಡುಕೋಣೆ ಹಾಗೂ ನಿರ್ದೇಶಕ ಸಂಜಯ್‌ಲೀಲಾ ಬನ್ಸಾಲಿ ಅವರ ತಲೆ ಕಡಿದವರಿಗೆ 10 ಕೋಟಿ ಬಹುಮಾನ ನೀಡುವುದಾಗಿ ಇತ್ತೀಚೆಗೆ ಅವರು ಘೋಷಿಸಿ ವಿವಾದದ ಕೇಂದ್ರ ಬಿಂದುವಾಗಿದ್ದರು.

     

    Share Information
    Advertisement
    Click to comment

    You must be logged in to post a comment Login

    Leave a Reply