Connect with us

    FILM

    ಲಾಲೆಟ್ಟಾ ಜೊತೆ ಕಾಂತಾರದ ಶಿವ – ಕೊಲ್ಲೂರಿನಲ್ಲಿ ಮೋಹನ್ ಲಾಲ್ ಭೇಟಿ ಮಾಡಿದ ರಿಷಬ್ ಶೆಟ್ಟಿ ದಂಪತಿ

    ಕುಂದಾಪುರ ಎಪ್ರಿಲ್ 18: ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆಯಲು ಕುಂದಾಪುರಕ್ಕೆ ಆಗಮಿಸಿದ್ದ ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರನ್ನು ರಿಷಬ್ ಶೆಟ್ಟಿ ದಂಪತಿ ಭೇಟಿ ಮಾಡಿದ್ದಾರೆ.


    ತಮ್ಮ ಸಮಾಜಿಕ ಜಾಲತಾಣದಲ್ಲಿ ಪೋಟೋ ಪೋಸ್ಟ್ ಮಾಡಿರುವ ರಿಷಬ್ ಶೆಟ್ಟಿ ಲೆಜೆಂಡರಿ ನಟನನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಸದ್ಯ ಕಾಂತಾರದ ಭಾಗ 1 ರ ಶೂಟಿಂಗ್ ನಲ್ಲಿರುವ ರಿಷಬ್ ಶೆಟ್ಟಿ ಕುಂದಾಪುರದ ಕೆರಾಡಿಯಲ್ಲಿ ಬೃಹತ್ ಸೆಟ್ ಗಳನ್ನು ಹಾಕಿ ಶೂಟಿಂಗ್ ನಡೆಸುತ್ತಿದ್ದಾರೆ.


    ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊತ್ತ ಈ ಚಿತ್ರದ ಶೂಟಿಂಗ್‌ ಕೊಡಚಾದ್ರಿ ಬೆಟ್ಟದ ಸುತ್ತಮುತ್ತಲೂ ನಡೆಯಲಿದೆ. ಹೀಗಾಗಿ ರಿಷಬ್‌ ತಮ್ಮ ಊರಿನಲ್ಲೇ ಬೀಡುಬಿಟ್ಟಿದ್ದಾರೆ. ಕೊಲ್ಲೂರು ದೇವಸ್ಥಾನ ಕೆರಾಡಿಗೆ ಸಮೀಪದಲ್ಲೇ ಇದ್ದು, ಇದೇ ಸಂದರ್ಭದಲ್ಲಿ ಮೋಹನ್‌ಲಾಲ್‌ ಅವರನ್ನು ಭೇಟಿಯಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply