ಶ್ರೀರಾಮ ಹುಟ್ಟಿದಕ್ಕೆ ದಾಖಲೆಗಳಿಲ್ಲ : ಸಿ.ಎಸ್ ದ್ವಾರಕನಾಥ್

ಮಂಗಳೂರು, ಡಿಸೆಂಬರ್ 05 : ಶ್ರೀರಾಮ ಹುಟ್ಟಿದಕ್ಕೆ ಯಾವುದೇ ದಾಖಲೆಗಳಿಲ್ಲ ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕನಾಥ್ ಹೇಳಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಸೋಷಿಯಲ್ ಡೆಮಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ( SDPI) ದಕ್ಷಿಣ ಕನ್ನಡ ಘಟಕ ಹಮ್ಮಿಕೊಂಡ ಬಾಬರಿ ಮಸೀದಿ ಧ್ವಂಸ ರಾಷ್ಟ್ರೀಯ ಅವಮಾನಕ್ಕೆ 25 ವರ್ಷ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತಿಹಾಸದಲ್ಲಿ ಮೂವರು ಮಹಾತ್ಮರ ಸೃಷ್ಟಿಗೆ ಮಾತ್ರ ದಾಖಲೆ ಮತ್ತು ಪುರಾವೆಗಳಿವೆ.

ಬುದ್ದ, ಯೇಸು ಕ್ರಿಸ್ತ, ಮಹಮ್ಮದ್ ಪೈಗಂಬರ್ ಈ ಮೂವರು ಮಹಾನ್ ಪುರುಷರ ಇರುವಿಕೆಗೆ ಸಾಕಷ್ಟು ಪುರಾವೆಗಳು ಲಭ್ಯ ಇವೆ ಎಂದು ಅವರು ಹೇಳಿದರು.

ಶ್ರೀರಾಮ ಅಸ್ಥಿತ್ವಕ್ಕೆ ಸರಿಯಾದ ಸ್ಪಷ್ಟತೆಯಿಲ್ಲ. ನಮ್ಮ ಮುತ್ತಜ್ಜರ ಹೆಸರೇ ನೆನಪಿರುವುದಿಲ್ಲ.

ಇನ್ನು 9 ಲಕ್ಷ ವರ್ಷದ ಹಿಂದಿನ‌ ವ್ಯಕ್ತಿಯ ಬಗ್ಗೆ ಮಾತನಾಡುವ ಬಗ್ಗೆ ಏನು ಹೇಳಬೇಕೆಂದು ಅರ್ಥವಾಗುತ್ತಿಲ್ಲ.

ಆದರೂ ಯಾವ ರೀತಿಯಲ್ಲಿ ಸುಳ್ಳುಗಳನ್ನು ಹಬ್ಬಿಸುತ್ತಾ ಹೋಗುತ್ತಿದ್ದಾರೆಂಬುದು ಆಶ್ಚರ್ಯಕರ ವಿಷಯ ಅಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಉಡುಪಿಯ ಪ್ರಗತಿಪರ ಚಿಂತಕ, ಸಾಹಿತಿ ಜಿ. ರಾಜಶೇಖರ್, ಎಸ್ ಡಿ ಪಿ ಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಡಾಜೆ , ಎಸ್ ಡಿಪಿ ಐ ಯ ಇತರ ಪ್ರಮುಖರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

VIDEO

Share Information