Connect with us

LATEST NEWS

ಆರೂರು ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರ ಡಾ. ಎಂ ಪಿ ರಾಘವೇಂದ್ರ ರಾವ್‌ ನೇಣಿಗೆ ಶರಣು….!!

ಉಡುಪಿ ಸೆಪ್ಟೆಂಬರ್ 27: ಆರೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ಮಾರು ಪಟೇಲರ ಮನೆ ಡಾ. ಎಂ ಪಿ ರಾಘವೇಂದ್ರ ರಾವ್‌ (76) ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಉಪ್ಪೂರು ಸೇರಿದಂತೆ ಕುಕ್ಕೆಹಳ್ಳಿ, ಕೊಳಲಗಿರಿಯಲ್ಲಿ ಹಾಗೂ ಪೆರ್ಡೂರು, ಮಲ್ಪೆ, ಕೆಮ್ಮಣ್ಣು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾಘವೇಂದ್ರ ರಾವ್‌ ಅವರು ಸೇವೆ ಸಲ್ಲಿಸಿದ್ದರು. ನಂತರ ಅವರು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ, ಜಿಲ್ಲಾ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಕೊಳಲಗಿರಿಯಲ್ಲಿ ವೈದ್ಯಕೀಯ ಸೇವೆಯನ್ನು ಮುಂದುವರಿಸಿದ್ದರು.


ಇತ್ತೀಚೆಗೆ ರಾಘವೇಂದ್ರ ರಾವ್‌ ಅವರ ಪತ್ನಿ ಗೀತಾ ರಾವ್‌‌‌‌ ನಿಧನ ಹೊಂದಿದ್ದು, ಅನಂತರ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ವಯೋ ಸಹಜ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಅವರು ಒಂಟಿ ಜೀವನದಿಂದ ಬೇಸತ್ತು ನೇಣುಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಇವರು ಹತ್ತಾರು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯದ ಮಾರ್ಗದರ್ಶಕರಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳ ನೇತಾರರಾಗಿದ್ದರು. ಮೃತರು ವೈದ್ಯರಾದ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.