Connect with us

LATEST NEWS

ನೂತನ ಕೃಷಿ ಕಾಯ್ದೆ ವಿರೋಧಿಸಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ ಎಸ್‌ಡಿ‌ಪಿಐ

ಮಂಗಳೂರು ಸೆಪ್ಟೆಂಬರ್ 27: ಕೇಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆ , ಭೂ ತಿದ್ದುಪಡಿ, ವಿಧ್ಯುತ್ ತಿದ್ದುಪಡಿ, ಕಾರ್ಮಿಕ ತಿದ್ದುಪಡಿ ಮಸೂದೆಗಳ ಜಾರಿ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ SDPI ಮಂಗಳೂರಿನಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಕ್ಲಾಕ್ ಟವರ್ ಬಳಿಯಲ್ಲಿ ರಸ್ತೆ ಬಂದ್ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿದರು.


ಪ್ರತಿಭಟನೆಯಲ್ಲಿ ಮಾತನಾಡಿದ ಅಥಾವುಲ್ಲ ಜೋಕಟ್ಟೆ ಕೇಂದ್ರ ಸರಕಾರದ ಕರಾಳ, ಜನವಿರೋಧಿ ನಿಲುವುಗಳನ್ನು ಖಂಡಿಸಿದರು, ನಾಲ್ಕು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ರೈತರು ಈ ದೇಶದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಇದಕ್ಕೆಲ್ಲವೂ ಕಾರಣ ಸರಕಾರದ ಅಪ್ರಭುದ್ದ ಜನವಿರೋಧಿ ನೀತಿಗಳಾಗಿದೆ , ದೇಶದ ಜೀವನಾಡಿಯಾದ ಅನ್ನದಾತನ ಶಾಪ ಸರಕಾರಕ್ಕೆ ತಟ್ಟಿ ಈ ಸರಕಾರದ ಅವನತಿಗೆ ಕಾರಣವಾಗಲಿದೆ ಎಂದರು.


ಪುತ್ತೂರಿನಲ್ಲೂ ಎಸ್ ಡಿಪಿಐ ಕಾರ್ಯಕರ್ತರು ನೂತನ ಕೃಷಿ ಕಾನೂನು ವಿರೋಧಿಸಿ ಉಪ್ಪಿನಂಗಡಿಯಲ್ಲಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು, ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆ ನಡೆಸಿ ಪ್ರತಿಭಟನೆ ನಡೆಸಿದ ಎಸ್ ಡಿಪಿಐ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.