Connect with us

FILM

ಪ್ರಜ್ಞಾಸ್ಥಿತಿಗೆ‌ ಮರಳಿದ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ

ಚೆನ್ನೈ ಅಗಸ್ಟ್ 27: ಕೊರೊನಾ ಸೊಂಕಿನ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಹಿನ್ನಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋ್ಗ್ಯ ಸ್ಥಿತಿ ಸುಧಾರಿಸಿದ್ದು, ಅವರು ಪ್ರಜ್ಞಾಸ್ಥಿತಿಗೆ ಮರಳಿದ್ದಾರೆ ಎಂದು ಎಂಜಿಎಂ ಆಸ್ಪತ್ರೆ ತಿಳಿಸಿದೆ.
ಎಸ್ ಪಿಬಿ ಅವರ ಆರೋಗ್ಯದ ಚೇತರಿಕೆಗೆ ಪ್ರಾರ್ಥಿಸುತ್ತಿದ್ದ ಲಕ್ಷಾಂತರ ಅಭಿಮಾನಿಗಳಿಗೆ ಇದು ಖುಷಿ ತಂದಿದೆ.

 


ಕೋವಿಡ್-19 ಸೋಂಕಿಗೆ ತುತ್ತಾಗಿರುವುದರಿಂದ ಅವರ ಶ್ವಾಸಕೋಶಕ್ಕೆ ಹಾನಿಯಾಗಿದೆ. ಆದರೆ, ಉಳಿದ ಅಂಗಾಂಗಗಳು ಉತ್ತಮವಾಗಿ ಕಾರ್ಯ‌ ನಿರ್ವಹಿಸುತ್ತಿವೆ. ಅವರ ಪುತ್ರ ಎಸ್.ಪಿ. ಚರಣ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅವರೊಟ್ಟಿಗೆ ಮಾತನಾಡಲು ಎಸ್ ಪಿಬಿ ಕೈಸನ್ನೆಗಳ ಮೂಲಕ ಪ್ರಯತ್ನಿಸಿದರು. ಆದರೆ, ಅವರಿಗೆ‌ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರು ಪ್ರಜ್ಞಾಸ್ಥಿತಿಯಲ್ಲಿದ್ದು ಎಚ್ಚರವಾಗಿಯೇ ಇದ್ದಾರೆ’ ಎಂದು ಎಂಜಿಎಂ ಹೆಲ್ತ್ ಕೇರ್ ನ ನಿರ್ದೇಶಕ ಡಾ.ಪ್ರಶಾಂತ್ ರಾಜಗೋಪಾಲನ್ ತಿಳಿಸಿರುವುದಾಗಿ ‘ದಿ‌ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ‌ಮಾಡಿದೆ


ಇನ್ನು ಎಸ್ ಪಿಬಿ ಅವರ ಆರೋಗ್ಯ ಬಗ್ಗೆ ಮಾಹಿತಿ ನೀಡಿರುವ ಎಸ್‌ಪಿಬಿ ಪುತ್ರ ಎಸ್‌ಪಿ ಚರಣ್, “ನಮ್ಮ ತಂದೆಯ ಆರೋಗ್ಯದ ಬಗ್ಗೆ ವೈದ್ಯರೊಂದಿಗೆ ಚರ್ಚಿಸಿದ್ದೇನೆ. ಎಲ್ಲವೂ ಸಾಮಾನ್ಯವೆಂದು ತೋರುತ್ತದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ … ಅವರು ಸುಮಾರು 90 ಪ್ರತಿಶತದಷ್ಟು ಗುಣಮುಖರಾಗಿದ್ದಾರೆ. ಕುಟುಂಬವಾಗಿ ನಾವು ಎಲ್ಲಾ ಪ್ರೀತಿ ಮತ್ತು ವಾತ್ಸಲ್ಯ ಮತ್ತು ನನ್ನ ತಂದೆಯ ಮಾರ್ಗಕ್ಕೆ ಬಂದ ಪ್ರಾರ್ಥನೆಗಳಿಗಾಗಿ ಕೃತಜ್ಞರಾಗಿರುತ್ತೇವೆ” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.