Connect with us

FILM

ಸಿಹಿಸುದ್ದಿ ನೀಡಿದ ವಿರಾಟ್ ಕೊಹ್ಲಿ : 2021ರ ಜನವರಿಯಲ್ಲಿ ಡಬಲ್ ಸಂಭ್ರಮ

ನವದೆಹಲಿ ಅಗಸ್ಟ್ 27: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ತಾವು ತಂದೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ 2017ರಲ್ಲಿ ಇಟಲಿಗೆ ತೆರಳಿ ಮದುವೆಯಾಗಿದ್ದರು. ಮದುವೆಯಾಗಿ ಮೂರು ವರ್ಷಗಳ ನಂತರದಲ್ಲಿ ಈ ದಂಪತಿ ಸಿಹಿ ಸುದ್ದಿ ನೀಡಿದೆ.


ಮದುವೆಯಾದ ನಂತರ ಅನುಷ್ಕಾ ಶರ್ಮಾ ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ನಟನೆಗಿಂತ ಸಿನಿಮಾ ನಿರ್ಮಾಣ ಕಾರ್ಯದಲ್ಲೇ ಹೆಚ್ಚು ತೊಡಗಿದ್ದರು. ಅವರ ಹೊಟ್ಟೆ ಕೊಂಚ ಉಬ್ಬಿದ್ದರಿಂದ ಅನುಷ್ಕಾ ಗರ್ಭಿಣಿ ಎಂದೇ ಹೇಳಲಾಗುತ್ತಿತ್ತು, ಈಗ ಖುದ್ದು ಅನುಷ್ಕಾ ಶರ್ಮಾ ಈ ವಿಚಾರವನ್ನು ಖಚಿತ ಪಡಿಸಿದ್ದಾರೆ.


ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋ ಹಾಕಿರುವ ಅನುಷ್ಕಾ, ನಾವು ಈಗ ಇಬ್ಬರಲ್ಲ ಮೂವರು ಎಂದು ಹೇಳಿದ್ದಾರೆ. ಈ ಮೂಲಕ ಅನುಷ್ಕಾ ಗರ್ಭಿಣಿ ಎಂಬುದನ್ನು ಅಧಿಕೃತಗೊಳಿಸಿದ್ದಾರೆ.