LATEST NEWS
5ತಿಂಗಳ ಮಗುವಿನೊಂದಿಗೆ ಬೆತ್ತಲಾಗಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ!?
ಹಾಂಗ್ಕಾಂಗ್, ಜನವರಿ 14: 5 ತಿಂಗಳ ಮಗುವನ್ನು ಹಿಡಿದುಕೊಂಡು ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಅಮೆರಿಕ-ಚೀನೀ ಸಮಾಜವಾದಿ ಸಾವಿನ ಅಸಲಿ ಕಾರಣವನ್ನು ಆಕೆಯ ಫ್ರೆಂಡ್ ಬಹಿರಂಗಪಡಿಸಿದ್ದು, ಗರ್ಭಿಣಿಯಾದ ನಂತರ ಆಕೆಯ ಬಾಯ್ಫ್ರೆಂಡ್ ಮದುವೆಯಾಗಲು ಒಪ್ಪದಿದ್ದಕ್ಕೆ ಈ ನಿರ್ಧಾರಕ್ಕೆ ಬಂದಳು ಎಂದು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ.
ಲೂ ಲಿಲಿ (34) ಮೃತ ಮಹಿಳೆ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲ್ಲರಿ ಕ್ಲಿಂಟನ್ ಮತ್ತು ಇಂಗ್ಲಿಷ್ ಗಾಯಕಿ ರಿಟಾ ಒರಾರಂತಹ ಪ್ರಖ್ಯಾತರಿಂದಲೇ ಮೆಚ್ಚುಗೆ ಪಡೆದಿದ್ದ ಲಿಲಿ, ತಮ್ಮ 5,000 ಚದರ ಅಡಿಯ ಪೆಂಟ್ಹೌಸ್ನಿಂದ ಮಗುವನ್ನು ಹಿಡಿದುಕೊಂಡೆ ಬೆತ್ತಲೆಯಾಗಿ ಧುಮುಕಿ ಪ್ರಾಣ ಬಿಟ್ಟಿದ್ದಾರೆ. ಪ್ರಸವದ ನಂತರದ ಖಿನ್ನತೆಗೆ ಒಳಗಾಗಿ ಮೃತಪಟ್ಟಿದ್ದಾರೆಂದು ಅನೇಕ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಿಲಿ ಅವರ ಸಾವನ್ನು ಆಕೆಯ ಫ್ರೆಂಡ್ ಒಬ್ಬರು ಮಾಧ್ಯಮಕ್ಕೆ ಖಚಿತಪಡಿಸಿದ್ದು, ಸಂಬಂಧದಲ್ಲಿದ್ದ ಬಾಯ್ಫ್ರೆಂಡ್ ಮದುವೆಗೆ ಒಪ್ಪುತ್ತಾನೆಂಬ ಭರವಸೆಯನ್ನು ಲಿಲಿ ಇಟ್ಟುಕೊಂಡಿದ್ದರಂತೆ. ಆದರೆ, ಗರ್ಭಿಣಿಯಾದ ಬಳಿಕ ಮದುವೆಯಾಗಲು ಒಪ್ಪಲಿಲ್ಲ. ಹೀಗಾಗಿ ತುಂಬಾ ನೊಂದಿದ್ದಳು ಎಂದು ತಿಳಿಸಿದ್ದಾರೆ.
ಚೀನಾದಲ್ಲಿ ಅನೇಕ ಐಷಾರಾಮಿ ಅಭಿವೃದ್ಧಿ ಯೋಜನೆಗಳನ್ನು ಹೊಂದಿರುವ ರಿಯಲ್ ಎಸ್ಟೇಟ್ ಉದ್ಯಮಿ ತಾಯಿಯ ಏಕೈಕ ಮಗಳಾಗಿ, ವಿದ್ಯಾವಂತೆ ಲಿಲಿ ಅವರು ಅದ್ಧೂರಿ ಜೀವನವನ್ನು ನಡೆಸುತ್ತಿದ್ದರು ಮತ್ತು ಚಿಕ್ಕ ವಯಸ್ಸಿನಿಂದಲೂ ಪ್ರಪಂಚದಾದ್ಯಂತ ಅಧ್ಯಯನ ಮಾಡಿದ್ದರು ಮತ್ತು ಪ್ರಯಾಣಿಸಿದ್ದರು. 2014ರಲ್ಲಿ ಲಿಲಿ, ತ್ರಿಬೆಲುಗಾ ಹೆಸರಿನ ಕಾವು ಕೊಡುವ ಸೇವಾಸಂಸ್ಥೆಯನ್ನು ತೆರೆದು ಚೀನಾದೊಂದಿಗೆ ಜಾಗತಿಕ ಉದ್ಯಮಗಳನ್ನು ಸಂಪರ್ಕಿಸಿದ್ದರು.
ಜಾಗತಿಕವಾಗಿ ತುಂಬಾ ಹೆಸರು ಮಾಡಿದ್ದ ಲಿಲಿ, ಕಳೆದ ಬುಧವಾರ ತಮ್ಮ ಐಷಾರಾಮಿ ಡುಪ್ಲೆಕ್ಸ್ ಅಪಾರ್ಟ್ಮೆಂಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತನ್ನ ಐದು ತಿಂಗಳ ಮಗುವನ್ನು ಸಹ ಜತೆಯಲ್ಲೇ ಹಿಡಿದುಕೊಂಡು ಕಟ್ಟಡದಿಂದ ಜಿಗಿದಿದ್ದ ಇಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಇಬ್ಬರ ಮೃತದೇಹ ಜ.6ರಂದು ಹಾಂಗ್ಕಾಂಗ್ನ ಯು ಮಾ ಟೈ ಅಪಾರ್ಟ್ಮೆಂಟ್ನ ಬ್ಲಾಕ್ನಲ್ಲಿ ಪತ್ತೆಯಾಗಿದ್ದಾಗಿ ಹಾಂಗ್ಕಾಂಗ್ ಪೊಲೀಸರು ತಿಳಿಸಿದ್ದು, ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ. ಇನ್ನೂ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಲಿಲಿ ಓರ್ವ ಆಶಾವಾದಿ, ಸಕಾರಾತ್ಮಕ ಮತ್ತು ದಯೆಯುಳ್ಳ ಮಹಿಳೆ ಎಂದು ವಿವರಿಸಿರುವ ಆಕೆಯ ಫ್ರೆಂಡ್, ಯಾವಾಗಲು ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇವೆ. ಒಂಟಿ ತಾಯಿಯಾಗಿದ್ದ ಆಕೆ ತನ್ನ ಮಗುವಿನ ತಂದೆಯ ಗುರುತನ್ನು ರಹಸ್ಯವಾಗಿರಿಸಿದ್ದಳು ಎಂದು ಹೇಳಿದ್ದಾರೆ. ಅಲ್ಲದೆ, ಆಕೆ ಪ್ರಸವದ ನಂತರ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ತಿಳಿದುಬಂದಿದೆ. ಬಾಯ್ಫ್ರೆಂಡ್ ಮದುವೆಯಾಗಲು ಒಪ್ಪದಿದ್ದರಿಂದ ತುಂಬಾ ನೊಂದಿದ್ದಳು ಎನ್ನಲಾಗಿದೆ.
ಯಾವುದೇ ಬಟ್ಟೆಯನ್ನು ಧರಿಸದೇ ಬೆತ್ತಲೆಯಾಗಿ ಮಗುವನ್ನು ಹಿಡಿದುಕೊಂಡು ಅಪಾರ್ಟ್ಮೆಂಟ್ನಿಂದ ಕೆಳಗೆ ಜಿಗಿದು ಲಿಲಿ ಮೃತಪಟ್ಟಿದ್ದಾರೆ. ಈ ಘಟನೆ ಹಾಂಗ್ಕಾಂಗ್ನ ಕೊವ್ಲೂನ್ನ ಹು ಮನ್ ಟಿನ್ನಲ್ಲಿ ನಡೆದಿದೆ. ಅಂದಹಾಗೆ ಲಿಲಿ, ತುಂಬಾ ಭಾವುಕ ಜೀವಿಯಾಗಿದ್ದರು ಎಂದು ಆಕೆಯ ಫ್ರೆಂಡ್ ತಿಳಿಸಿದ್ದು, ಲಿಲಿ ಸಾವಿಗೆ ಸಾಕಷ್ಟು ಮಂದಿ ಕಂಬನಿ ಮಿಡಿದಿದ್ದಾರೆ.