LATEST NEWS
ಉಡುಪಿಗೆ ಆಗಮಿಸಿದ ಕರೋನಾ ಲಸಿಕೆ
ಉಡುಪಿ, ಜನವರಿ 14: ಮಂಗಳೂರಿನಿಂದ ಆಗಮಿಸಿದ ಕರೋನಾ ಲಸಿಕೆಯನ್ನು ಉಡುಪಿ ಜಿಲ್ಲಾಡಳಿತ ಜಾಗಟೆ ಮತ್ತು ಘಂಟಾನಾದದ ಮೂಲಕ ಲಸಿಕೆಯನ್ನು ಸ್ವಾಗತಿಸಿದೆ.
ಅಜ್ಜರಕಾಡು ಆರೋಗ್ಯಾಧಿಕಾರಿ ಕಚೇರಿಯಲ್ಲಿರುವ ಕೋಲ್ಡ್ ಸ್ಟೋರೇಜ್ ನಲ್ಲಿ ಲಸಿಕೆಯನ್ನು ಇರಿಸಲಾಗಿದ್ದು, ಮೊದಲ ಹಂತದಲ್ಲಿ 12000 ಡೋಸೇಜ್ ತರಿಸಿಕೊಳ್ಳಲಾದೆ. ಲಸಿಕೆ ಸ್ವೀಕರಿಸಲು ಜಿಲ್ಲೆಯಲ್ಲಿ 22,230 ಜನರು ಹೆಸರು ನೊಂದಾಯಿಸಿಕೊಂಡಿದ್ದಾರೆ.
ಮೊದಲ ಸುತ್ತಿನಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಜಿಲ್ಲಾಡಳಿತ ಆದ್ಯತೆ ನೀಡಿದೆ, ಡಿ ಗ್ರೂಪ್ ನೌಕರರಿಂದ ವೈದ್ಯಾಧಿಕಾರಿಗಳ ವರೆಗೆ ಎಲ್ಲರಿಗೂ ಮೊದಲ ಸುತ್ತಿನಲ್ಲಿ ಲಸಿಕೆ ವಿತರಣೆಯಾಗಲಿದೆ. ಜಿಲ್ಲೆಯಲ್ಲಿ ಐದು ಸರಕಾರಿ ಕೇಂದ್ರಗಳು ಮತ್ತು ಒಂದು ಖಾಸಗಿ ಕೇಂದ್ರದ ಮೂಲಕ ಲಸಿಕೆ ವಿತರಣೆ ನಡೆಯಲಿದ್ದು, 16 ನೇ ತಾರೀಖಿನಂದು ಜಿಲ್ಲೆಯಲ್ಲಿ ಲಸಿಕೆ ವಿತರಣೆ ಆರಂಭವಾಗಲಿದೆ.
ಪ್ರತಿ ಕೇಂದ್ರದಲ್ಲಿ 100 ಜನರಂತೆ ದಿನಕ್ಕೆ 600 ಜನರಿಗೆ ಲಸಿಕೆ ನೀಡಲು ನಿರ್ಧಾರ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಲಸಿಕೆ ವಿತರಿಸಲು 94 ಕೇಂದ್ರಗಳನ್ನು ಜಿಲ್ಲಾಡಳಿತ ಈಗಾಗಲೇ ಗುರುತಿಸಿದೆ.
ಜಿಲ್ಲೆಯಲ್ಲಿ 23,203 ಜನರಿಗೆ ಕರೋನ ಕಾಣಿಸಿಕೊಂಡಿದ್ದು, ಈ ಪೈಕಿ 189 ಜನರನ್ನು ಕೊರೋನಾ ಮಹಾಮಾರಿ ಬಲಿ ಪಡೆದುಕೊಂಡಿದೆ.