Connect with us

    DAKSHINA KANNADA

    ರಸ್ತೆ ಬದಿಯಲ್ಲಿ ಹಾವು-ಇಲಿ ಕಾಳಗ – ಕೊನೆಗೆ ಹಾವನ್ನೇ ಹೊತ್ತೊಯ್ದ ಇಲಿ.. ವಿಡಿಯೋ ವೈರಲ್

    ಪುತ್ತೂರು ನವೆಂಬರ್ 02: ಹಾವುಗಳು ಇಲಿಯನ್ನು ಹಿಡಿದು ತಿನ್ನುವ ದೃಶ್ಯಗಳನ್ನು ನೋಡಿರುತ್ತಿರಾ ಆದರೆ ಇಲ್ಲಿ ಮಾತ್ರ ಇಲ್ಲಿ ಮಾತ್ರ ನೇರ ವಿರುದ್ಧ ಘಟನೆ ನಡೆದು ಇಲಿಯೊಂದು ಹಾವನ್ನೇ ಹಿಡಿದಿದೆ. ಈ ಘಟನೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಕಡಬ ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಳಾರ ಎಂಬಲ್ಲಿ ಪುಟ್ಟ ಇಲಿಯೊಂದು ಹಾವಿನೊಂದಿಗೆ ಕಾದಾಡಿ ಕೊನೆಗೆ ಹಾವನ್ನೇ ಹಿಡಿದುಕೊಂಡು ಪೊದೆಯೊಳಗೆ ಹೋಗಿದೆ. ಕಳಾರದ ಗಣೇಶ್ ಎಂಬವರ ದಿನಸಿ ಅಂಗಡಿಯ ಮುಂದೆ ಸಂಜೆ ಸುಮಾರು ಐದು ಗಂಟೆಗಳ ಸುಮಾರಿಗೆ ಸಣ್ಣ ಕೇರೆ ಹಾವಿನ ಮರಿಯಂತಿದ್ದ ಹಾವಿನ ಮರಿಯೊಂದಿಗೆ ಇಲಿಯೊಂದು ಕಾದಾಡಿ ಕೊನೆಗೆ ಇಲಿಯು ಹಾವನ್ನೇ ಹಿಡಿದುಕೊಂಡು ಪೊದೆಯೊಳಗಡೆ ಮರೆಯಾಗಿದೆ.ಗಣೇಶ್ ಅವರ ಅಂಗಡಿಯಲ್ಲಿದ್ದ ಗ್ರಾಹಕರೋರ್ವರು ಈ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply