LATEST NEWS
ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ – ನಳಿನ್ ಕುಮಾರ್ ಕಟೀಲ್

ಮಂಗಳೂರು ನವೆಂಬರ್ 02: ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಸಿಂದಗಿಯಲ್ಲಿ ಬಿಜೆಪಿ ಗೆ ಅಭೂತಪೂರ್ವ ಗೆಲುವಾಗಿದ್ದು, ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇನ್ನು ಹಾನಗಲ್ ನಲ್ಲಿ ಸಣ್ಣಮಟ್ಟದ ಸೋಲಾಗಿದೆ, ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ. ಮುಂದಿನ ಚುನಾವಣೆಗೆ ಇನ್ನಷ್ಟು ಹೋರಾಟ ಮಾಡುತ್ತೇವೆ. ಮತದಾರ ಕೊಟ್ಟ ತೀರ್ಪಿಗೆ ತಲೆಬಾಗುತ್ತೇವೆ. ಹಾನಗಲ್ ಕ್ಷೇತ್ರ ದ ಸೋಲು ಮುಖ್ಯಮಂತ್ರಿ ಗೆ ಹಿನ್ನಡೆಯಲ್ಲ, ಅವರ ಕ್ಷೇತ್ರ ಅಂತಾನೂ ಇಲ್ಲ, ಅಲ್ಲಿನ ಮತದಾರ ಆಮಿಷಕ್ಕೆ ಒಳಗಾಗಿದ್ದಾನೆ, ಹೀಗಾಗಿ ನಮಗೆ ಹಿನ್ನಡೆಯಾಗಿದೆ ಎಂದರು, ಇನ್ನು ಸೋಲಿನ ಬಗ್ಗೆ ಕೂತು ಚರ್ಚೆ ಮಾಡುತ್ತೇವೆ ಎಂದರು. ಇನ್ನು ಹಾನಗಲ್ ನಲ್ಲಿ ಸೂಟ್ ಕೇಸ್ ಕೆಲಸ ಮಾಡಿಲ್ಲ ಎಂಬ ಡಿಕೆಶಿ ಆರೋಪ ವಿಚಾರ ಹಾಗಾದರೆ ಕನಕಪುರ ದಲ್ಲಿ ಡಿಕೆಶಿ ಗೆಲುವಿಗೆ ಸೂಟ್ ಕೇಸ್ ಕೆಲಸ ಮಾಡಿದ್ಯಾ ಎಂದು ಪ್ರಶ್ನಿಸಿದರು.
