Connect with us

    FILM

    ಕಿರುತೆರೆ ನಟಿ ವೈಶಾಲಿ ಠಕ್ಕರ್ ನೇಣಿಗೆ ಶರಣು….!!

    ಮಧ್ಯಪ್ರದೇಶ ಅಕ್ಟೋಬರ್ 16: ಕಿರುತೆರೆ ನಟಿಯರ ಆತ್ಮಹತ್ಯೆ ಸರಣಿ ಮತ್ತೆ ಮುಂದುವರೆದಿದ್ದು, ಇದೀಗ ಖ್ಯಾತ ಕಿರುತೆರೆ ನಟಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ (26)​ ಅವರು ಮಧ್ಯಪ್ರದೇಶದ ಇಂದೋರ್​ನಲ್ಲಿರುವ ತಮ್ಮ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.


    ವೈಶಾಲಿ ಅವರು ತಂದೆ ಮತ್ತು ಸಹೋದರನೊಂದಿಗೆ ಇಂದೋರ್‌ನಲ್ಲಿ ನೆಲೆಸಿದ್ದರು. ಸಸುರಾಲ್​ ಸಿಮರ್​ ಕಾ’ ಧಾರಾವಾಹಿ ಮೂಲಕ ಹಿಂದಿ ಕಿರುತೆರೆಗೆ ಕಾಲಿಟ್ಟ ವೈಶಾಲಿ, ಸಾಕಷ್ಟು ಖ್ಯಾತಿ ಗಳಿಸಿದ್ದರು. ‘ಸೂಪರ್​ ಸಿಸ್ಟರ್ಸ್​’, ‘ಮನಮೋಹಿನಿ 2’ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

    ಇತ್ತೀಚೆಗೆ ‘ಯೇ ರಿಷ್ತಾ ಕ್ಯಾ ಕೆಹಲಾತಾ ಹೈ’, ‘ಯೇ ಹೈ ಆಶಿಕಿ’, ‘ರಕ್ಷಾ ಬಂಧನ್​’ ಮುಂತಾದ ಧಾರಾವಾಹಿಗಳಲ್ಲಿ ವೈಶಾಲಿ ನಟಿಸಿದ್ದರು. ಘಟನಾ ಸ್ಥಳದಲ್ಲಿ ಡೆತ್‌ ನೋಟ್​ ಕೂಡ ಸಿಕ್ಕಿದ್ದು, ಘಟನೆಗೆ ಸಂಬಂಧಿಸಿ ತೇಜಾಜಿ ನಗರ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply