Connect with us

    LATEST NEWS

    ಟೋಲ್ ಗೇಟ್ ಗಳಲ್ಲಿ ಸ್ಥಳೀಯರಿಗೆ ವಿನಾಯಿತಿಗೆ ಆಗ್ರಹಿಸಿ ಪ್ರತಿಭಟನೆ

    ಉಡುಪಿ ಫೆಬ್ರವರಿ 16: ದೇಶದಾದ್ಯಂತ ಇಂದಿನಿಂದ ಪಾಸ್ಟ್ ಟ್ಯಾಗ್ ಕಡ್ಡಾಯ ಹಿನ್ನಲೆ ಉಡುಪಿ ಜಿಲ್ಲೆಯ ಸಾಸ್ತಾನ ಟೋಲ್ ಗೇಟ್ ನಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ರದ್ದುಗೊಳಿಸುವದರ ವಿರುದ್ದ ನಾಗರೀಕರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.


    ದೇಶದಾದ್ಯಂತ ಟೋಲ್ ಗೇಟ್ ಗಳಲ್ಲಿ ಇಂದಿನಿಂದ ಪಾಸ್ಟ್ ಟ್ಯಾಗ್ ಕಡ್ಡಾಯ ಮಾಡಿ ಕೇಂದ್ರ ಸರಕಾರ ಆದೇಶಿಸಿತ್ತು. ಈ ಹಿನ್ನಲೆ ಸಾಸ್ತಾನದಲ್ಲಿರುವ ನವಯುಗ ಕಂಪೆನಿಯ ಟೋಲ್ ಗೇಟ್ ನಲ್ಲಿ ಇಂದಿನಿಂದ ಕಡ್ಡಾಯ ಫಾಸ್ಟ್ ಟ್ಯಾಗ್ ಆದೇಶ ಪಾಲನೆ ಮಾಡಲು ಮುಂದಾಗಿದೆ. ಇಲ್ಲಿಯವರಗೆ ಸ್ಥಳೀಯ ವಾಹನಗಳಿಗೆ ಸಿಗುತ್ತಿದ್ದ ವಿನಾಯಿತಿ ರದ್ದಾಗುವ ಸಾಧ್ಯತೆ ಹಿನ್ನಲೆ ಸ್ಥಳೀಯ ಗ್ರಾಮಸ್ಥರು ಪಾಸ್ಟ್ಯಾಗ್ ನಿಂದ ವಿನಾಯಿತಿಗೆ ಆಗ್ರಹಿಸಿ ಟೋಲ್ ಗೇಟ್ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು.


    ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿದರೆ ಸ್ಥಳೀಯ ಗ್ರಾಮಸ್ಥರಿಗೆ ಸಂಕಷ್ಟವಾಗಲಿದ್ದು,ಯಾವುದೇ ಕಾರಣಕ್ಕೂ ಸ್ಥಳೀಯರಿಂದ ಸುಂಕ ಪಡೆಯಬಾರದು ಪ್ರತಿಭಟನಾಕಾರರು ಆಗ್ರಹಿಸಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಕಲ್ಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply