LATEST NEWS
ಮಧ್ಯಪ್ರದೇಶ – ಸೇತುವೆಯಿಂದ ಕಾಲುವೆಗೆ ಬಿದ್ದ ಬಸ್ 32ಕ್ಕೂ ಅಧಿಕ ಮಂದಿ ಸಾವು
ಭೋಪಾಲ್ ಫೆಬ್ರವರಿ 16: ಮಧ್ಯಪ್ರದೇಶದಲ್ಲಿ ಭೀಕರ ದುರಂತ ಸಂಭವಿಸಿದೆ. ಸೇತುವೆಯಿಂದ ಕಾಲುವೆಗೆ ಬಸ್ ಉರುಳಿ ಬಿದ್ದು ಕನಿಷ್ಠ 32ಕ್ಕೂ ಅಧಿಕ ಜನ ಸಾವಿಗೀಡಾಗಿದ್ದು, 2oಕ್ಕೂ ಜನ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಪತ್ತೆಗೆ ರಕ್ಷಣಾ ಕಾರ್ಯ ಮುಂದುವರೆದಿದೆ.
ಸಿಧಿ ಜಿಲ್ಲಾ ಕೇಂದ್ರದಿಂದ 80 ಕಿಮೀ ದೂರದ ಪಾಟ್ನಾ ಗ್ರಾಮದ ಬಳಿ ಬೆಳಗ್ಗೆ 7.30ಕ್ಕೆ ಅವಘಡ ಸಂಭವಿಸಿದೆ. ಬೆಳಿಗ್ಗೆ 7: 30 ರ ಸುಮಾರಿಗೆ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಸೇತವೆಯಿಂದ ಕಾಲುವೆಗೆ ಉರುಳಿ ಬಿದ್ದಿದೆ. ಬಸ್ ನಲ್ಲಿ ಸುಮಾರು 60 ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ.
ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ 32 ಮೃತದೇಹಗಳನ್ನು ಬನ್‌ಸಾಗರ ಕಾಲುವೆಯಿಂದ ಹೊರತೆಗೆಯಲಾಗಿದೆ. ಉಳಿದವರ ಪತ್ತೆಗೆ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಬನ್‌ಸಾಗರ ಕಾಲುವೆಯಿಂದ ಇದುವರೆಗೂ 18 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕನಿಷ್ಠ 20 ಪ್ರಯಾಣಿಕರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಿದ್ದಾರೆ.
ಬಸ್ ಕಾಲುವೆಗೆ ಉರುಳಿದ ಬಳಿಕ ಕನಿಷ್ಠ 7 ಜನ ಈಜಿ ದಡಕ್ಕೆ ಸೇರಿದ್ದಾರೆ ಎಂದು ಉಮೇಶ್ ಜೋಗ ಹೇಳಿದ್ದಾರೆ.