LATEST NEWS
ಮೀನು ಮಟ್ಟಿದ್ದೇನೆ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದ್ರು ರಾಹುಲ್ ಗಾಂಧಿ

ಉಡುಪಿ ಎಪ್ರಿಲ್ 27 : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೇಸ್ ಮುಖಂಡ ರಾಹುಲ್ ಗಾಂಧಿ ಇಂದು ಕಾಪುವಿನಲ್ಲಿ ಮೀನುಗಾರರ ಸಮಾವೇಶದಲ್ಲಿ ಭಾಗಿಯಾದರು. ಈ ವೇಳೆ ಮೀನುಗಾರ ಮಹಿಳೆಯೊಬ್ಬರು ರಾಹುಲ್ ಗಾಂಧಿಗೆ ಅಂಜಲ್ ಮೀನನ್ನು ಉಡುಗೊರೆಯಾಗಿ ನೀಡಿದರು.
ಕಾರ್ಯಕ್ರಮದ ಬಳಿಕ ಕಾಂಗ್ರೇಸ್ ಮುಖಂಡರು ರಾಹುಲ್ ಗಾಂಧಿಯನ್ನು ಪಕ್ಕದಲ್ಲೇ ಇರುವ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.

ಈ ವೇಳೆ ಸ್ಥಳೀಯ ಮುಖಂಡರು ದೇವಸ್ಥಾನದ ಒಳಗೆ ಬರುವಂತೆ ಮನವಿ ಮಾಡಿದಾಗ ಮೀನು ಮುಟ್ಟಿದ್ದೇನೆ ದೇವಸ್ಥಾನದ ಒಳಗೆ ಬರುವುದಿಲ್ಲ ಎಂದು ತಿಳಿಸಿದರು. ಬಳಿಕ ದೇಗುಲದ ಪ್ರಾಂಗಣದಲ್ಲಿಯೇ ಅರ್ಚಕರು ರಾಹುಲ್ ಗಾಂಧಿ ಅವರನ್ನು ಗೌರವಿಸಿದರು.