Connect with us

    LATEST NEWS

    ಓಲಾ ಲೀಸ್ ಮೇಳಕ್ಕೆ ಓಲಾ ಕ್ಯಾಬ್ ಚಾಲಕರಿಂದ ಮುತ್ತಿಗೆ ಕರಪತ್ರ ಬ್ಯಾನರ್ ಗೆ ಬೆಂಕಿ

    ಓಲಾ ಲೀಸ್ ಮೇಳಕ್ಕೆ ಓಲಾ ಕ್ಯಾಬ್ ಚಾಲಕರಿಂದ ಮುತ್ತಿಗೆ ಕರಪತ್ರ ಬ್ಯಾನರ್ ಗೆ ಬೆಂಕಿ

    ಮಂಗಳೂರು ಜನವರಿ 25: ಓಲಾ ಕಂಪೆನಿ ಇಂದು ಮಂಗಳೂರಿನಲ್ಲಿ ಆಯೋಜಿಸಿದ್ದ ಓಲಾ ಲೀಸ್ ಮೇಳಕ್ಕೆ ಓಲಾ ಕ್ಯಾಬ್ ಚಾಲಕರೇ ಮುತ್ತಿಗೆ ಹಾಕಿ ಕರಪತ್ರ ಬ್ಯಾನರ್ ಗಳಿಗೆ ಬೆಂಕಿ ಹಾಕಿದ ಘಟನೆ ನಡೆದಿದೆ.

    ದಕ್ಷಿಣಕನ್ನಡ ಜಿಲ್ಲಾ ಆನ್ ಲೈನ್ ಟ್ಸಾಕ್ಸಿ ಚಾಲಕರ ಮತ್ತು ಮಾಲಕರ ಎಸೋಸಿಯೇಶನ್ ನೇತೃತ್ವದಲ್ಲಿ ಓಲಾ ಮೇಳಕ್ಕೆ ನುಗ್ಗಿದ ಪ್ರತಿಭಟನಾಕಾರರು, ಕಂಪೆನಿಯ ಪ್ರಚಾರದ ಬ್ಯಾನರ್ ಮತ್ತು ಕರಪತ್ರಗಳನ್ನು ಬೆಂಕಿಯಲ್ಲಿ ಸುಟ್ಟು ಪ್ರತಿಭಟನೆ ನಡೆಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು ಹಾಲಿ ಇರುವ ಅಪರೇಟರುಗಳಿಗೆ ಸರಿಯಾದ ಟ್ರಿಪ್ ಗಳಿಲ್ಲದೆ ಬ್ಯಾಂಕ್ ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡುವ ಹಾದಿಯಲ್ಲಿದ್ದಾರೆ ಎಂದು ಆರೋಪಿಸಿದರು. ನಿರುದ್ಯೋಗಿ ಯುವಕರಲ್ಲಿ ಸುಳ್ಳು ಭ್ರಮೆಗಳನ್ನು ಹುಟ್ಟಿಸಿ ಟಾಟಾ ಮತ್ತು ಹುಂಡೈ ಕಂಪೆನಿಗಳ ಕಾರು ಮಾರಾಟದ ತಂತ್ರಗಳಿಗೆ ಯುವ ಜನತೆಯನ್ನು ಬಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ವ್ಯಾಪಾರದ ಆಮಿಷ ನೀಡಿ ಸಾಲದ ಕೂಪಕ್ಕೆ ತಳ್ಳುವ ಓಲಾ ಕಂಪೆನಿಯವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನಲೆಯಲ್ಲಿ ನಗರದ ಲಾಲ್ ಬಾಗ್ ಬಳಿ ಇರುವ ಓಲಾ ಕಂಪೆನಿಯವರು ಹಾಕಿದ್ದ ಓಲಾ ಲೀಸ್ ಮೇಳ ನುಗ್ಗಿದ ಪ್ರತಿಭಟನಾಕಾರರು ಓಲಾ ಕಂಪೆನಿಯ ಕರಪತ್ರ ಬ್ಯಾನರ್ ಗಳಿಗೆ ಬೆಂಕಿ ಹಾಕಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply