Connect with us

    DAKSHINA KANNADA

    ಕ.ರ.ವೇ ಬೆವರಿಳಿಸಿದ ತುರವೇ

    ಕ.ರ.ವೇ ಬೆವರಿಳಿಸಿದ ತುರವೇ

    ಮಂಗಳೂರು,ಜನವರಿ 25 :ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಮಂಗಳೂರಿನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಗೊಂದಲಕ್ಕೆ ಕಾರಣವಾಗಿತ್ತು.

    ತುಳುನಾಡಿನ ಬಗ್ಗೆ ಹಾಗೂ ತುಳುವಿನ ಬಗ್ಗೆ ಅವಮಾನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದ ಕ.ರ.ವೇ ಬೆಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಜಾನ್ ಎಂಬಾತನಿಗೆ ಬುದ್ಧಿ ಕಲಿಸಲು ಕಾಯುತ್ತಿದ್ದ ತುಳುನಾಡು ಸಂಘಟನೆಗಳು ಈ ಅವಕಾಶವನ್ನು ರೈಲು ನಿಲ್ದಾಣದಲ್ಲಿ ಸರಿಯಾಗಿ ಬಳಸಿಕೊಂಡಿತು.

    ರೈಲು ತಡೆ ಪ್ರತಿಭಟನೆಗೆ ಬಂದಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ಮುಗಿಸಿ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ರೈಲು ನಿಲ್ದಾಣಕ್ಕೆ ಆಗಮಿಸಿದ ತುಳುನಾಡ ಸಂಘಟನೆಗಳು ಕ.ರ.ವೇ ಕಾರ್ಯಕರ್ತರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದವು.

    ಜಾನ್ ವಿರುದ್ಧ ಕೆಂಡಾಮಂಡಲವಾದ ತುಳುನಾಡ ಸಂಘಟನೆಗಳು ಆತನ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಜಿಲ್ಲೆಯ ಕ.ರ.ವೇ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಬೆವರಿಳಿಸಿದ್ದಾರೆ.

    ಕ.ರ.ವೇ ಜಿಲ್ಲಾಧ್ಯಕ್ಷ ಅನಿಲ್ ದಾಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ತುಳುನಾಡ ಸಂಘಟನೆಗಳು ತುಳುನಾಡಿನ ಬಗ್ಗೆ ಅವಮಾನಕಾರಿ ಹೇಳಿಕೆ ನೀಡುವವರ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ.

    ಎತ್ತಿನಹೊಳೆ ಯೋಜನೆಯ ವಿರುದ್ಧ ಪ್ರತಿಭಟನೆಗೆ ಬೆಂಬಲ ನೀಡದ ಜಿಲ್ಲೆಯ ಕ.ರ.ವೇ ಪದಾಧಿಕಾರಿಗಳು ಇದೀಗ ಮಹದಾಯಿ ಯೋಜನೆ ಹೋರಾಟಕ್ಕೆ ಪ್ರತಿಭಟನೆ ಮಾಡುವುದಕ್ಕೂ ತುಳುನಾಡು ಸಂಘಟನೆಗಳು ವಿರೋಧ ವ್ಯಕ್ತಪಡಿಸಿದವು.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply